ಮೂಳೂರು ಮಸೀದಿಗೆ ಬಿಯರ್ ಬಾಟಲಿ ತೂರಾಟ: ದಾಂದಲೆ ಯತ್ನ
ಉಡುಪಿ: ಕಾಪುವಿನ ಮೂಳೂರು ಜುಮ್ಮಾ ಮಸೀದಿಯ ಆವರಣಕ್ಕೆ ಕಿಡಿಗೇಡಿ ಯುವಕರು ಬಿಯರ್ ಬಾಟಲುಗಳನ್ನು ಎಸೆದು ದಾಂದಲೆಗೆ ಯತ್ನಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಚುನಾವಣೆ ಮುಗಿದ ನಂತರ ರಾತ್ರಿ ಸುಮಾರು 8 ಗಂಟೆಗೆ 3- 4 ಮಂದಿ ಯುವಕರು ಮಸೀದಿಯ ಹೊರಗೆ ನಿಂತು ಎರಡು ಬಿಯರ್ ಬಾಟಲುಗಳನ್ನು ಎಸೆದಿದ್ದಾರೆ. ಇದನ್ನು ನೋಡಿ ಜನ ಸೇರುತ್ತಿದ್ದಂತೆ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದರಿಂದ ಮಸೀದಿಯ ಬಳಿ ಜನ ಸೇರಿ ಕೆಲಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸ್ಥಳಕ್ಕೆ ಜೆಡಿಎಸ್ ನಾಯಕ ದೇವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ನಾಯಕ್ ಎಂ.ಎ. ಗಫೂರ್ ಆಗಮಿಸಿ ಜನರಿಗೆ ಸಮಾಧಾನ ಹೇಳಿದರು.