ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹೊತ್ತೇರಿದಂತೆ ಮತದಾನ ಬಿರುಸು

Vishwanath S
Updated On : 6 May 2013, 11:38 am

ಮಂಗಳೂರು: ಜಿಲ್ಲೆಯಲ್ಲಿ ಮತದಾನ ಪ್ರಾರಂಭವಾದ 2 ಗಂಟೆ ಅವಧಿಯಲ್ಲಿ ಶೇ. 10 ಮತದಾನವಾಗಿತ್ತು. ಬೆಳಗ್ಗೆ 9ರ ನಂತರ ಮತದಾನ ವೇಗ ಪಡೆದುಕೊಂಡಿತು.
 ಉಳ್ಳಾಲದ 24 ಮತಗಟ್ಟೆಯಲ್ಲಿ ಬೆಳಗ್ಗೆ 9ರ ವೇಳೆಗೆ 97 ಮತ ಚಲಾವಣೆಯಾಗಿತ್ತು. ಮತಗಟ್ಟೆ ಸಂಖ್ಯೆ 40ರಲ್ಲಿ 1030 ಮತಗಳಿದ್ದು, 10.30ಕ್ಕೆ 204 ಮತ ಚಲಾವಣೆಗೊಂಡಿತು.
ಬೂತ್ ಅಧಿಕಾರಿಗೆ ದೂರು: ಇಲ್ಲಿ ಮೊಹಮ್ಮದ್ ರಫೀಕ್ ಹಾಗೂ ಇನ್ನಿಬ್ಬರ ಹೆಸರು ಮತದಾರರ ಪಟ್ಟಿಯಲ್ಲಿ ಡಿಲೀಟ್ ಆಗಿದ್ದು, ಬೂತ್ ಅಧಿಕಾರಿಗಳಿಗೆ ದೂರು ನೀಡಿದ ರಫೀಕ್ ಅವರಿಗೆ ಮತ್ತು ಇನ್ನಿಬ್ಬರಿಗೆ ಮಧ್ಯಾಹ್ನ ನಂತರ ಮತ ಹಾಕಲು ಬರುವಂತೆ ಸೂಚಿಸಿದರು.
 ಉಳ್ಳಾಲ ರಸ್ತೆಯ ಬದಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಚಿಹ್ನೆಗಳ ಬಾವುಟಗಳು ಹಾರಾಡುತ್ತಿದ್ದವು. ಉಳ್ಳಾಲ ಮತಗಟ್ಟೆ ಸಂಖ್ಯೆ 2ರಲ್ಲಿ ಲ್ಯಾಪ್‌ಟಾಪ್‌ನಲ್ಲಿ ಚಾರ್ಚ್ ಇಲ್ಲದ ಕಾರಣ ವೆಬ್ ಕಾಸ್ಟಿಂಗ್ ಸಮಸ್ಯೆ ಉಂಟಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗದ ಘಟನೆಯೂ ನಡೆಯಿತು.
 ಕುತ್ತಾರ್ ಬಳಿ ಅಭ್ಯರ್ಥಿ ಯು.ಟಿ. ಖಾದರ್ ಮತ್ತು ಪಕ್ಷೇತರ ಬೆಂಬಲಿಗರ ನಡುವೆ ಕಿತ್ತಾಟ ನಡೆಯಿತು. ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ತೋರು ಬೆರಳಿಗೆ ಶಾಯಿ: ಬಂಟ್ವಾಳ ತಾಲೂಕಿನ ಬಾಳೆಪುಣಿ ಶಾಲೆಯ ಮತಗಟ್ಟೆಯಲ್ಲಿ ಮತದಾರರ ತೋರುಬೆರಳಿಗೆ ಮತದಾನದ ಗುರುತಾದ ಶಾಯಿಯನ್ನು ಹಾಕಿದ್ದರೆ, ಇನ್ನು ಕೆಲವರಿಗೆ ಅವರು ತೋರಿಸಿದ ಬೆರಳಿಗೆ ಶಾಯಿ ಗುರುತು ಹಾಕಲಾಗಿತ್ತು.
 ಜಿಲ್ಲಾಡಳಿತ ವತಿಯಿಂದ ಮತದಾರರನ್ನು ಕರೆತರಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬಾಳೆಪುಣಿ, ಮುಡಿಪು, ಉಳ್ಳಾಲ ಪರಿಸರದಲ್ಲಿ ಆಯೋಗ ಕಲ್ಪಿಸಿದ್ದ ಬಸ್ಸಿಗೆ ಮತದಾರರಿಂದ ಯಾವುದೇ ಸ್ಪಂದನೆ ದೊರಕಲಿಲ್ಲ. ಇದಕ್ಕೆ ಆಯೋಗ ಬಸ್ ವ್ಯವಸ್ಥೆಯ ಬಗ್ಗೆ ಸರಿಯಾದ ಮಾಹಿತಿ ನೀಡದಿರುವುದೇ ಕಾರಣವಾಗಿತ್ತು.
ಮತದಾರರ ಚೀಟಿ ಮತ್ತು ಗೊಂದಲ
ಮತ ಹಾಕಲು ಚುನಾವಣಾ ಆಯೋಗ ಮನೆ ಮನೆಗೆ ನೀಡಿರುವ ಮತದಾರರ ಚೀಟಿ ಹೊರತು ಪಡಿಸಿದರೆ ಬೇರೆ ಯಾವ ದಾಖಲೆಗಳ ಅಗತ್ಯವಿಲ್ಲ ಎಂಬುದಾಗಿ ಚುನಾವಣೆ ಅಧಿಕಾರಿ ಘೋಷಿಸಿದ್ದರು. ಆದರೆ ಹೆಚ್ಚಿನ ಕಡೆಗಳಲ್ಲಿ ಮತದಾರರು ಚೀಟಿ ಹೊಂದಿದ್ದರೂ, ಗುರುತಿನ ಚೀಟಿ ತರುವಂತೆ ಕಡ್ಡಾಯ ಮಾಡಿದ್ದರು. ಇನ್ನು ಕೆಲವು ಕಡೆಯಲ್ಲಿ ಪಕ್ಷದ ಏಜೆಂಟ್‌ಗಳು ನೀಡಿದ ಚೀಟಿಯನ್ನು ಚುನಾವಣಾಧಿಕಾರಿಗಳು ಮಾನ್ಯತೆ ಇಲ್ಲ ಎಂದು ಗೊತ್ತಿರದ ಮತದಾರರು ಮತ ಕೇಂದ್ರದಿಂದ ವಾಪಸ್ ಹೋಗಿ ಆಯೋಗದ ಚೀಟಿ ತರಬೇಕಾಯಿತು.
ತಂತ್ರಜ್ಞಾನ ಪ್ಲಸ್ ಪಾಯಿಂಟ್
ಹೊಸಬೆಟ್ಟು ಮತಗಟ್ಟೆಯಲ್ಲಿ ಮತದಾರರಿಗೆ ತಮ್ಮ ಪಟ್ಟಿಯಲ್ಲಿ ಹೆಸರು ಹುಡುಕುವ ಕುರಿತು ಗೊಂದಲ ಉಂಟಾಯಿತು. ಅಲ್ಲದೆ ಮತಗಟ್ಟೆಯ ಬಿಎಲ್‌ಒ ಅಧಿಕಾರಿಗೆ ಮತದಾರರ ಹೆಸರು ಯಾವ ಮತಗಟ್ಟೆಯಲ್ಲಿ ಇದೆ ಎಂಬುವುದನ್ನು ತಿಳಿಸಲು ಕಷ್ಟವಾಯಿತು. ಈ ಸಂದರ್ಭ ಯುವ ಮತದಾರ ವಿನೋದ್ ಅವರು ತಮ್ಮ ಮೊಬೈಲ್‌ನಲ್ಲಿ ್ಛಜ್ಟ್ಞಛ್ಠಟಿಛಡಿಛ್ಞಛ.ಟ್ಝ್ಛಿ.್ಝಟಿ ಮೂಲಕ ಹೊಸ ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಿ ನಂಬರ್ ಪಡೆದು ಬಿಎಲ್‌ಒ ಅಧಿಕಾರಿಗೆ ತೋರಿಸಿ ತಕ್ಷಣ ಮತ ಚಲಾಯಿಸಿದರು. ಇದು ಚುನಾವಣಾ ಆಯೋಗದ ತಂತ್ರಜ್ಞಾನದ ಕೊಡುಗೆಗೆ ಸಾಕ್ಷಿಯಾಯಿತು.
ಗಾಂಧೀಜಿ ಮುಖಕ್ಕೂ ಪೇಪರ್
ಚುನಾವಣಾ ಆಯೋಗ ಮತಗಟ್ಟೆಗಳನ್ನು ಶಾಲೆಗಳಲ್ಲಿ ಮಾಡಿದ್ದರಿಂದ, ನೀತಿ ಸಂಹಿತೆಯ ಹಿನ್ನಲೆಯಲ್ಲಿ ಶಾಲೆ ಗೋಡೆಗಳಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರ, ರಾಷ್ಟ್ರಪತಿಗಳ ಭಾವಚಿತ್ರಕ್ಕೆ ಪೇಪರ್ ಅಂಟಿಸಿ ಮರೆಮಾಚಲಾಗಿತ್ತು. ಇದರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಸರ್ವಪಲ್ಲಿ ರಾಧಾಕೃಷ್ಣನ್ ಮಾತ್ರವಲ್ಲದೆ ಮಹಾತ್ಮ ಗಾಂಧೀಜಿ ಅವರ ಚಿತ್ರಗಳಿಗೂ ಪೇಪರ್ ಅಂಟಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement