ಚುನಾವಣಾ ಕರ್ತವ್ಯ ಬಳಿಕ ಹೃದಯಾಘಾತದಿಂದ ಸಾವು
ಹೆಬ್ರಿ: ಬಜಗೋಳಿಯ ನಲ್ಲೂರು ನಿವಾಸಿ ಕಂದಾಯ ಇಲಾಖೆಯಲ್ಲಿ ಗ್ರಾಮಕರಣಿಕ ಶ್ರೀಕಾಂತ್ (55) ಎಂಬವರು ಭಾನುವಾರ ಚುನಾವಣಾ ಕರ್ತವ್ಯ ಮುಗಿಸಿ ಮರಳುವಾಗ ಹೃದಯಾಘಾತದಿಂದ ಮೃತಪಟ್ಟರು. ಕಾರ್ಕಳ ತಾಲೂಕಿನ ಬಳಿಕ ಈಗ ಕುಂದಾಪುರ ತಾಲೂಕಿನಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಪುತ್ರಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದರು.