ಜನತಾ ದರ್ಶನ ಬಳಿಕ ಕ್ಷೌರಕ್ಕೆ ಬೆಂಗಳೂರಿಗೆ!
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣ ಜೆ.ಪಾಲೇಮಾರ್ ತಿಂಗಳ ಬಳಿಕ ಸೋಮವಾರ ಕ್ಷೌರ ಮಾಡಿ ನಿರಾಳರಾದರು. ಆದರೆ ಅದಕ್ಕಾಗಿ ಬೆಂಗಳೂರಿಗೆ ಹೋದರು!
ಎಂದಿನಂತೆ ಸೋಮವಾರ ಬೆಳಗ್ಗೆ 4.30ಕ್ಕೆ ಎದ್ದು 5.30ರವರೆಗೆ ವಾಕಿಂಗ್ ನಂತರ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರು. ಬಳಿಕ ಮನೆಯಲ್ಲಿಯೇ ಕಡತಗಳು, ಅರ್ಜಿಗಳನ್ನು ಪರಿಶೀಲಿಸಿದರು. ವ್ಯಾಪಾರ ವಹಿವಾಟಿನ ಚೆಕ್‌ಗಳಿಗೆ ಸಹಿ ಹಾಕಿ, ಸ್ನಾನ, ದೇವರ ಪೂಜೆ ಮಾಡಿ ಹೊರಗೆ ಬದರು.
ಜನತಾ ದರ್ಶನಕ್ಕೆ ಹಲವರು ಕಾಯುತ್ತಿದ್ದರು. ಅವರ ಜತೆ ಕಷ್ಟ, ಸುಖ ವಿಚಾರಿಸಿದರು. ದೃಷ್ಟಿ ಅಂಗವಿಕಲರೊಬ್ಬರಿಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ರಿಯಾಯಿತಿಯಲ್ಲಿ ಆಪರೇಷನ್‌ಗೆ ಶಿಫಾರಸು ಮಾಡಿದರೆ, ಗಂಟಲು ಬ್ಲಾಕ್ ಆಗಿರುವ ಸುಮಾಳಿಗೆ ಅಪರೇಷನ್‌ಗೆ ನೆರನು ನೀಡುವುದಾಗಿ ಭರವಸೆ ನೀಡಿದರು. ಕಾಟಿಪಳ್ಳದ ವೃದ್ಧರೊಬ್ಬರಿಗೆ ಕಿಡ್ನಿ ಡಯಾಲಿಸಿಸ್‌ಗೆ ವೆನ್ಲಾಕ್‌ಗೆ ಸೂಚಿಸಿದರು.
8 ಗಂಟೆಗೆ ಬಜ್ಪೆಯತ್ತ ಪ್ರಯಾಣಿಸಿ ವಿಮಾನ ಮೂಲಕ ಬೆಂಗಳೂರಿಗೆ ಬೆ. 11ಕ್ಕೆ ತಲುಪಿದರು. “Shave ಮಾಡದೆ ತಿಂಗಳು ಕಳೆದಿತ್ತು. ಬೆಂಗಳೂರು ಮುಟ್ಟಿದವನೇ ಕ್ಷೌರ ಮಾಡಿಸಿಕೊಂಡೆ. ಸ್ನಾನ, ಮಧ್ಯಾಹ್ನ ಊಟ ಮಾಡಿ, ಮಲಗಿ 3.30 ಎದ್ದು ಮೀಟಿಂಗ್ ಮಾಡಿದೆ. ಸಂಜೆ ಬೆಂಗಳೂರಲ್ಲಿಯೆ ಗೆಳೆಯರ ಜತೆ ಕಾಲ ಕಳೆದೆ’ ಎನ್ನುತ್ತಾರೆ ಪಾಲೇಮಾರ್.