ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಳೆ 11.30ಕ್ಕೆ ಫಲಿತಾಂಶ ಘೋಷಣೆ: ಡೀಸಿ

Lingaraj Badiger
Updated On : 7 May 2013, 11:21 am

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭೆಕ್ಷೇತ್ರಗಳ ಮತ ಎಣಿಕೆ ಕಾರ್ಯ ಕೊಡಿಯಾಲಬೈಲ್ ಕೆನರಾ ಕಾಲೇಜಿನಲ್ಲಿ ನಡೆಯಲಿದೆ. ಬೆಳಗ್ಗೆ 11.30ರ ವೇಳೆಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ತಿಳಿಸಿದರು.
 ಪ್ರತಿ ಕ್ಷೇತ್ರಕ್ಕೂ 14 ಮೇಜುಗಳು ಇರಲಿವೆ. ಒಂದು ಮೇಜಿಗೆ ಒಬ್ಬರು ಸೂಪರ್ ವೈಸರ್, ಒಬ್ಬರು ಎಣಿಕೆ ಸಹಾಯಕರು, ಒಬ್ಬರು ಮೈಕ್ರೊ ವೀಕ್ಷಕ ಮತ್ತು ಡಿ ಗ್ರೂಪ್ ನೌಕರರನ್ನು ನಿಯೋಜಿಸಲಾಗಿದೆ. ಒಟ್ಟು 513 ಮಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಅತಿ ಹೆಚ್ಚು ಮತ್ತು ಕಡಿಮೆ ಮತದಾನ ಸೇರಿಂದತೆ ಏರಿಳಿತ ದಾಖಲಿಸಿರುವ ಮತಗಟ್ಟೆಗಳ ಬಗ್ಗೆ ವಿಶೇಷ ಗಮನವಿಟ್ಟು ಪರಿಶೀಲನೆ ಮಾಡಲಾಗಿದೆ. ಮತದಾನ ಜಾಗೃತಿಗೆ ಕೈಗೊಂಡ ಸ್ವೀಪ್ ಕಾರ್ಯಕ್ರಮ ಯಶಸ್ವಿಯಾಗಿದೆ. ಕಳೆದ ಬಾರಿ 2008ರಲ್ಲಿ 73.08 ಮತದಾನವಾಗಿತ್ತು. ಈ ಬಾರಿ ಶೇ.74.48 ಮತದಾನವಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಈ ಬಾರಿ ಉತ್ತಮ ಮತದಾನವಾಗಿದೆ. ಮತದಾನ ಜಾಗೃತಿ ಸ್ವೀಪ್ ಕಾರ್ಯಕ್ರಮಕ್ಕೆ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 2.5 ಲಕ್ಷ ಬಂದಿತ್ತು. ಖಾಸಗಿ ಸಹಭಾಗಿತ್ವ ಕೂಡಾ ಪಡೆಯಲಾಗಿದೆ ಎಂದರು. 62 ಸಾವಿರ ಹೊಸ ಮತದಾರನ್ನು ಪಟ್ಟಿಗೆ ಸೇರಿಸಿದ್ದು ಉತ್ತಮ ದಾಖಲೆಯೇ. ಕೊನೆ ಕ್ಷಣದಲ್ಲಿ ಸೇರ್ಪಡೆಯಾದವರಿಗೆ ಮುಂದಿನ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡಲಾಗುವುದು ಎಂದರು.
ಕನಿಷ್ಠ ಮತದಾನ: ಕನಿಷ್ಠ ಮತದಾನವಾಗಿರುವುದು ಮಂಗಳೂರು 204ನೇ ಕ್ಷೇತ್ರದ ವಿಶ್ವಮಂಗಲ ಹಿರಿಯ ಪ್ರಾಥಮಿಕ ಶಾಲೆ ಕೊಣಾಜೆಯಲ್ಲಿ. ಒಟ್ಟು ಮತದಾರರು 781, ಮತ ಚಲಾಯಿಸಿದವರು 211. ಒಟ್ಟಾರೆ ಶೇ.27.02 ಮತದಾನವಾಗಿದೆ.
 ಜಿಲ್ಲಾಧಿಕಾರಿ ಹರ್ಷಗುಪ್ತ, ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ, ಮಹಾನಗರ ಪಾಲಿಕೆ ಆಯುಕ್ತ ಹರೀಶ್ ಕುಮಾರ್ ಇದ್ದರು.  
 387 ಮಹಿಳೆಯರಲ್ಲಿ 164 ಮಂದಿ ಮತ ಚಲಾಯಿಸಿದರೆ 394 ಪುರುಷರಲ್ಲಿ 47 ಮಂದಿ ಮಾತ್ರ
ತರಬೇತಿ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗೆ ಕೊನೆ ಕ್ಷಣದ ತರಬೇತಿಯನ್ನು ಜಿಲ್ಲಾ ಚುನಾವಣೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಹರ್ಷಗುಪ್ತ, ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ, ಮಹಾನಗರ ಪಾಲಿಕೆ ಆಯುಕ್ತ ಹರೀಶ್ ಕುಮಾರ್ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement