ಮದ್ಯ ಸಿಗದೆ ಸಾವು!
ಕಾರ್ಕಳ: ವಿಪರೀತ ಮದ್ಯಪಾನ ಮಾಡುತ್ತಿದ್ದ ವ್ಯಕ್ತಿ ಎರಡು ದಿನ ಮದ್ಯ ಸಿಗದೆ ಮೃತಪಟ್ಟ ಘಟನೆ ಇಲ್ಲಿನ ಬಜಗೋಳಿಯಲ್ಲಿ ಭಾನುವಾರ ನಡೆದಿದೆ. ಮಹಾಬಲ ಮೂಲ್ಯ ಮೃತರು. ವಿಪರೀತ ಮದ್ಯಪಾನದ ಚಟ ಹೊಂದಿದ್ದ ಅವರು ಬಜಗೋಳಿ ಪೇಟೆಯಲ್ಲಿ ಅಂಗಡಿಗಳ ಬಾಗಿಲಲ್ಲಿ ಮಲಗುತ್ತಿದ್ದರು. ಚುನಾವಣೆ ಸಂಬಂಧ ಎರಡು ದಿನ ಶರಾಬು ಕುಡಿಯಲು ಸಿಗದ ಹಿನ್ನೆಲೆಯಲ್ಲಿ ಇಲ್ಲಿನ ವೈನ್ಸ್ ಅಂಗಡಿಯೊಂದರ ಹಿಂಬದಿ ತೆರೆದ ಕಟ್ಟಡದ ಒಳಗೆ ಮಲಗಿದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಗಣೇಶ್ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.