ಅರೆಕಾಲಿಕ ಉಪನ್ಯಾಸಕರ ಹುದ್ದೆಗೆ ಆಹ್ವಾನ
ಮಂಗಳೂರು: ಕದ್ರಿ ಹಿಲ್ಸ್ನ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗೆ ಪ್ರೌಢಶಾಲಾ ಪಠ್ಯಕ್ರಮದಂತೆ ಭೋದಿಸಲು ಅರೆಕಾಲಿಕ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಸ್ವವಿವರದ ಜತೆಗೆ ವಿದ್ಯಾರ್ಹತೆಯ ಅಂಕಪಟ್ಟಿ, ಪದವಿ ಪ್ರಮಾಣ ಪತ್ರಗಳ ಜೆರಾಕ್ಸ್ ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ಮೇ 20 ಕೊನೆ ದಿನ. ಹುದ್ದೆಯ ವಿವರ: ಗಣಿತ-2, ಇಂಗ್ಲಿಷ್-2, ಹಿಂದಿ (ಸಹಾಯಕ ಉಪನ್ಯಾಸಕರು-2), ಮ್ಯೆಕಾನಿಕ್ ಉಪನ್ಯಾಸಕ-2, ಎಲೆಕ್ಟ್ರಿಕಲ್ ಉಪನ್ಯಾಸಕ- 2. ಉಪನ್ಯಾಸಕರಿಗೆ ಪ್ರತಿ ಗಂಟೆಗೆ ರು. 350ರಂತೆ ತಿಂಗಳಿಗೆ ರು. 7500 ಅರೆಕಾಲಿಕ ಭತ್ಯೆ ಪಾವತಿಸಲಾಗುವುದು.ಪ್ರಾಚಾರ್ಯರು, ಸರ್ಕಾರಿ ತಾಂತ್ರಿಕ ಶಾಲೆ, ಕದ್ರಿ ಹಿಲ್ಸ್ಗೆ ಸಲ್ಲಿಸಬಹುದು. ಮಾಹಿತಿಗಾಗಿ 0824-2213342 ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ರಿಂದ ರಾಜ್ಯಮಟ್ಟದ ಬ್ಯಾಡ್ಮಿಂಟನ್
ಮಂಗಳೂರು: ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಸಂಘದ ವತಿಯಿಂದ ಮೇ 11, 12 ರಂದು ಮಣಿಪಾಲದ ಸಿಂಡಿಕೇಟ್ ಬ್ಯಾಂಕಿನ ಬ್ಯಾಡ್ಮಿಟಂನ್ ಸಭಾಂಗಣದಲ್ಲಿ ಪುರುಷ, ಮಹಿಳೆ ಮತ್ತು ಮಕ್ಕಳ 'ರಾಜ್ಯಮಟ್ಟದ ಬ್ಯಾಡ್ಮಿಟಂನ್ ಸ್ಪರ್ಧೆ' ನಡೆಯಲಿದೆ. ಮಾಹಿತಿಗಾಗಿ 9880301268 ಸಂಪರ್ಕಿಸಬಹುದು.
11ರಂದು ಯಕ್ಷಗಾನ ಪ್ರದರ್ಶನ
ಮಂಗಳೂರು: ಕಲ್ಕೂರ ಪ್ರತಿಷ್ಠಾನ, ಕರ್ಣಾಟಕ ಯಕ್ಷಧಾಮದಿಂದ ಅಕ್ಷಯ ತೃತೀಯ ಅದ್ವಿತೀಯ ಯಕ್ಷಗಾನ ಪ್ರದರ್ಶನ 11ರಂದು ಸಂಜೆ 4 ರಿಂದ ಡಾನ್ ಬಾಸ್ಕೋ ಹಾಲ್ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಪೂರ್ಣಚಂದ್ರ ಮೇಳದವರಿಂದ 'ಸುದರ್ಶನೋಪಾಖ್ಯಾನ' ಮತ್ತು ಬಂಗಾರಮಕ್ಕಿ ಮೇಳದವರಿಂದ 'ಧರ್ಮಾಂಗದ ದಿಗ್ವಿಜಯ' ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
13ರಿಂದ ಬ್ರಹ್ಮಕಲಶೋತ್ಸವ
ಮಂಗಳೂರು: ಕೊಳವೂರು ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 13 ರಿಂದ 16ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ದೇವಸ್ಥಾನದ ಜೀರ್ಣೊದ್ಧಾರ ಕಾರ್ಯವು ರು. 1.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಬ್ರಹ್ಮಕಲಶಕ್ಕೆ ಸಿದ್ಧಗೊಂಡಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್.ಎಂ. ಅಡ್ಯಂತಾಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.