ಇಂದು ಘೋಷಣೆ, ಮೆರವಣಿಗೆ ನಿಷೇಧ
ಮಂಗಳೂರು: ಕೆನರಾ ಕಾಲೇಜಿನಲ್ಲಿ ಮೇ 8ರಂದು ಮತ ಎಣಿಕೆ ನಡೆಯಲಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಿಜಯೋತ್ಸವ ಮೆರವಣಿಗೆ ನಿಷೇಧಿಸಲಾಗಿದೆ. ಯಾವುದೇ ಆಯುಧ, ಸ್ಫೋಟಕ ಒಯ್ಯುವಂತಿಲ್ಲ, ಬಹಿರಂಗ ಘೋಷಣೆ ಮಾಡುವಂತಿಲ್ಲ. ಹಾಡು, ವಾದ್ಯ, ವ್ಯಾಖ್ಯಾನ ಮಾಡುವುದು, ಸನ್ನೆ ಮಾಡುವುದು ನಿಷೇಧಿಸಲಾಗಿದೆ. ಮೃತದೇಹಗಳು ಅಥವಾ ಅವುಗಳ ಆಕೃತಿ, ಪ್ರತಿಮೆ ಪ್ರದರ್ಶನ ನಿಷೇಧಿಸಲಾಗಿದೆ. ಮೆರವಣಿಗೆ, ಕರಾಳ ದಿನ, ಪ್ರತಿಭಟನೆ, ಸಭೆ, ಸಮಾರಂಭ ನಿಷೇಧಿಸಲಾಗಿದೆ ಎಂದು ಕಮಿಷನರ್ ಮನೀಶ್ ಕರ್ಬಿಕರ್ ತಿಳಿಸಿದ್ದಾರೆ.