ಕುಮಾರಸ್ವಾಮಿ ವಿದ್ಯಾಲಯಕ್ಕೆ ಶೇ.100
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ಪ್ರೌಢಶಾಲೆಯು 2012- 13ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸುವುದರೊಂದಿಗೆ ಸತತ ಎಂಟನೇ ವರ್ಷ ಶೇ. 100 ಫಲಿತಾಂಶ ದಾಖಲಿಸಿದೆ.
55 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 17ಮಂದಿ ವಿಶಿಷ್ಟ ಶ್ರೇಣಿ ತೇರ್ಗಡೆಯಾದರೆ, 35 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 3 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾಲಯದಲ್ಲಿ ಅತೀ ಹೆಚ್ಚು ಅಂಕ ಪಡೆದ ಅಂಕಿತ್ ಯು.ಕೆ. (598) ವಿದ್ಯಾಲಯಕ್ಕೆ ಪ್ರಥಮ ಸ್ಥಾನಿಯಾದರೆ, ಶೀತಲ್ ಪಾಣತ್ತಿಲ ಮತ್ತು ಶ್ರಾವ್ಯ .ಎಂ (583) ಅಂಕಗಳೊಂದಿಗೆ ದ್ವಿತೀಯ ಸ್ಥಾನಗಳಿಸಿದ್ದಾರೆ. ತೃತೀಯ ಸ್ಥಾನವನ್ನು ಅಜಯ್ .ಕೆ (579) ಗಳಿಸಿದ್ದಾರೆ. ಪ್ರೀತಿ ಭಟ್ ಪಾರ್ಪಕಜೆ (572), ಅಂಜಲಿ .ಕೆ(570), ಕಾವ್ಯ ಪಿ.ಸಿ. (570), ನಿತೀನ್ ವೈ.ಪಿ. (565), ನಾಗೇಂದ್ರ ಕಾಮತ್ (562), ನಿಧೀಶ್ ಬಿ.ಎನ್.(562), ಸೃಜನ್ ಆರ್.ಟಿ. (562), ಸುಮಂತ್ ಕೆ.ಎಚ್. (554), ಅನೀಶ್ ಕೆ.ಎಸ್. (543), ನಿಶ್ಮಿತಾ .ಬಿ(538), ಕಲೈವಾಣಿ .ಡಿ (536), ಶ್ರೇಯಸ್ .ಎ.ಎಚ್ (534), ನಿಖಿಲಾ .ಕೆ (533), ವಿನೋದ್ .ಎಂ.ಬಿ (529), ನಮಿತಾ ಪಿ.ಸಿ. (526), ಮಿಥುನ್ .ಕೆ (524), ಮನುದೇವ್ .ಪಿ.ವೈ (523), ದೀಕ್ಷಾ .ಬಿ.ಎಚ್ (522),ನಿಹಾಲ್ .ಬಿ.ಎಲ್ (517), ಲಾವಣ್ಯ ಪಿ.ಜಿ. (516), ಪ್ರಥ್ವಿ ಪಿ.ಸಿ. (508), ಪಲ್ಲವಿ ಎಸ್.ಜೆ. (505), ಅನ್ವಿತಾ .ಎ.ಎಂ (505), ಮರಿಯಾ ಎಲಿಜಾಬೆತ್ (503), ಶಿಲ್ಪಾಶ್ರೀ .ಎಂ.ಎ (503) ವಿಶಿಷ್ಟ ಶ್ರೇಣಿಯಲ್ಲಿ ಮತ್ತು ಅತೀ ಹೆಚ್ಚು ಅಂಕಗಳಿಸಿದ್ದಾರೆ.