ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೆಳ್ತಂಗಡಿ: ಪಿಯುಸಿ ಫಲಿತಾಂಶ ಪ್ರಕಟ

Vishwanath S
Updated On : 8 May 2013, 4:06 am

ಬೆಳ್ತಂಗಡಿ: ತಾಲೂಕಿನ ಪದವಿಪೂರ್ವ ಕಾಲೇಜುಗಳ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ಹಳೇ ಕೋಟೆ ವಾಣಿ ಕಾಲೇಜು ಶೇ.97 ಉತ್ತಮ ಫಲಿತಾಂಶ ದಾಖಲಿಸಿದೆ. ಅದೇ ರೀತಿ ಪಟ್ಟಣದ ಸೈಂಟ್ ತೆರೆಸಾ ಕಾಲೇಜು ಶೇ.100 ಫಲಿತಾಂಶ ಪಡೆದಿದೆ. ವಾಣಿ ಕಾಲೇಜು- ಶೇ.97, ಕಲಾ ವಿಭಾಗದಲ್ಲಿ ಶೇ.100, ವಾಣಿಜ್ಯ ವಿಭಾಗದಲ್ಲಿ ಶೇ.99.30 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.90 ಫಲಿತಾಂಶ. ಸೈಂಟ್ ತೆರೆಸಾ ಬೆಳ್ತಂಗಡಿ ಕಾಲೇಜು ಶೇ.100 ಫಲಿತಾಂಶ ಪಡೆದಿದೆ. ಉಜಿರೆ ಎಸ್‌ಡಿಎಂ ಕಾಲೇಜು ಶೇ.96.36 ಫಲಿತಾಂಶ ಪಡೆದಿದೆ. ಕಲಾ ವಿಭಾಗದಲ್ಲಿ ಶೇ.92.94, ವಾಣಿಜ್ಯ ವಿಭಾಗದಲ್ಲಿ 99.35 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.95 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಉಜಿರೆ ಎಸ್‌ಡಿಎಂ ಸನಿವಾಸ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಮಾತ್ರವಿದ್ದು, ಶೇ.97.28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗುರುದೇವ ಕಾಲೇಜು ಫಲಿತಾಂಶ ಶೇ.88, ಕಲಾ-ಶೇ.100, ವಾಣಿಜ್ಯ 92 ಹಾಗೂ ವಿಜ್ಞಾನ ವಿಭಾಗ-ಶೇ.72 ಫಲಿತಾಂಶ ದಾಖಲಿಸಿದೆ. ಮುಂಡಾಜೆ ಕಾಲೇಜು ಒಟ್ಟು ಶೇ. 98.76, ಕಲಾ-ಶೇ.97.18, ವಾಣಿಜ್ಯ-ಶೇ.100, ಗೇರುಕಟ್ಟೆ ಕಾಲೇಜು ಒಟ್ಟು ಶೇ. 94, ಕಲಾ-ಶೇ.98, ವಿಜ್ಞಾನ- ಶೇ.78, ನಡ ಕಾಲೇಜಿನಲ್ಲಿ ಕಲಾ ವಿಭಾಗ ಮಾತ್ರವಿದ್ದು ಶೇ. 94.37 ಫಲಿತಾಂಶ ದೊರಕಿದೆ. ಅನುಗ್ರಹ ಉಜಿರೆ ಕಾಲೇಜು ಒಟ್ಟು ಶೇ.97, ಕಲಾ-ಶೇ.100, ವಾಣಿಜ್ಯ-95.91, ವೇಣೂರು ಕಾಲೇಜು ಒಟ್ಟು ಶೇ. 90.64, ಕಲಾ- ಶೇ.91, ವಾಣಿಜ್ಯ- ಶೇ.97.36, ವಿಜ್ಞಾನ- ಶೇ. 77.07, ಪುಂಜಾಲಕಟ್ಟೆ ಒಟ್ಟು ಶೇ.95.32, ಕಲಾ- ಶೇ.99, ವಾಣಿಜ್ಯ ಶೇ.100, ವಿಜ್ಞಾನ-ಶೇ.77.77, ಅಳದಂಗಡಿ ಒಟ್ಟು ಶೇ. 85, ಕಲಾ- ಶೇ.90, ವಾಣಿಜ್ಯ ಶೇ. 87, ವಿಜ್ಞಾನ- ಶೇ. 56, ಬೆಳ್ತಂಗಡಿ ಕಾಲೇಜು ಒಟ್ಟು ಶೇ. 83.88, ಕಲಾ-78.74, ವಾಣಿಜ್ಯ- ಶೇ.91.66, ಕೊಯ್ಯೂರು ಕಾಲೇಜಿಗೆ ಶೇ.90 ಫಲಿತಾಂಶ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement