ಮತ ಎಣಿಕೆಗೆ ದ.ಕ. ಸಜ್ಜು
ಮಂಗಳೂರು: ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜಾಗಿದ್ದು, ಎಣಿಕಾ ಕೇಂದ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅವರ ಏಣಿಕಾ ಒಬ್ಬ ಏಜೆಂಟ್ ಮಾತ್ರ ಮೊಬೈಲ್ ಕೊಂಡೊಯ್ಯಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ಹೇಳಿದರು. ಮತ ಎಣಿಕೆ ಸಿದ್ಧತೆಯ ಅಂತಿಮ ಸುತ್ತಿನ ಅಣಕು ಪ್ರದರ್ಶನದದಲ್ಲಿ ಮಾತನಾಡಿ, ಎಣಿಕಾ ಕೇಂದ್ರದ ಆವರಣದಲ್ಲಿ ಓಡಾಡುತ್ತಾ ಮಾತಾಡುವುದನ್ನು ನಿಷೇಧಿಸಲಾಗಿದೆ ಎಂದರು.