ಸಂಚಾರ ಬದಲಾವಣೆ
ಮಂಗಳೂರು: ಮತ ಎಣಿಕೆ ಪ್ರಕ್ರಿಯೆಯು ಕೊಡಿಯಾಲ್‌ಬೈಲ್‌ನ ಕೆನರಾ ವಿದ್ಯಾಲಯದಲ್ಲಿ ನಡೆಯಲಿದ್ದು, ಈ ಸಂದರ್ಭ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಮನೀಷ್ ಕರ್ಬಿಕರ್ ಹೇಳಿದ್ದಾರೆ.
ಜೈಲ್ ಜಂಕ್ಷನ್ ಕಡೆಯಿಂದ ಬೆಸೆಂಟ್ ಜಂಕ್ಷನ್ ಕಡೆಯಿಂದ, ಕೆನರಾ ಕಾಲೇಜು ಕಡೆಗೆ ಚುನಾವಣೆ ಅಧಿಕಾರಿಗಳ ಹಾಗೂ ಪೊಲೀಸ್ ಅಧಿಕಾರಿಗಳ ವಾಹನ ಹೊರತು ಪಡಿಸಿ, ಇತರೆ ವಾಹನಗಳನ್ನು ನಿಷೇಧಿಸಿದೆ.
ಪಿವಿಎಸ್‌ನಿಂದ ಬಲ್ಲಾಳ್‌ಬಾಗ್ ತನಕ ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಕರಂಗಲ್ ಪಾಡಿ ಕಡೆಯಿಂದ ಜೈಲ್ ಕಡೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಜೈಲ್ ಜಂಕ್ಷನ್‌ನಿಂದ ಕೋರಿರೊಟ್ಟಿ ಕ್ರಾಸ್ ರಸ್ತೆಯ ವಾಣಿಜ್ಯ ಕಟ್ಟಡಗಳ ಪಾರ್ಕಿಂಗ್ ಹೊರತುಪಡಿಸಿ ಬೇರೆಯವರಿಗೆ ಅವಕಾಶವಿಲ್ಲ. ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆ ಬಗ್ಗೆ ಅವಶ್ಯವಿರುವ ಸೂಚನಾ ಫಲಕ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಸಹಾಯಕ ಪೊಲೀಸರು ಆಯುಕ್ತರು ಅಧಿಕಾರ ಹೊಂದಿರುತ್ತಾರೆ.