ಸಂಪಾಜೆ, ಹರಿಹರ ಪಲ್ಲತ್ತಡ್ಕ ಕಾಲೇಜ್‌ಗೆ ಶೇ.100
ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಪಿಯುಸಿ ಪರೀಕ್ಷೆಯಲ್ಲಿ ದಾಖಲೆ ಬರೆದ ಕಾಲೇಜ್‌ಗಳ ವಿವರ ಇಂತಿದೆ. ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು- ವಿಜ್ಞಾನ ವಿಭಾಗದಲ್ಲಿ 60 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದ ಇಲ್ಲಿ 59 ಮಂದಿ ಉತ್ತೀರ್ಣರಾಗಿದ್ದು, ಶೇ. 98 ಫಲಿತಾಂಶ ದಾಖಲಾಗಿದೆ. 11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು ಪಡೆದಿದ್ದಾರೆ. ಕಲಾ ವಿಭಾಗದಲ್ಲಿ- 46 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 97 ಫಲಿತಾಂಶ ದಾಖಲಾಗಿದೆ. ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ- ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 76 ಮಂದಿಯಲ್ಲಿ 67 ಮಂದಿ ಉತ್ತೀರ್ಣರಾಗಿದ್ದಾರೆ. ಇಬ್ಬರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದವರು 63. ಉತ್ತೀರ್ಣ- 59, ಶೇ. 3 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ದಾಖಲಾಗಿದ್ದಾರೆ. ಕಂಪ್ಯೂಟರ್ ಸಯನ್ಸ್ ವಿಭಾಗದಲ್ಲಿ ಪರೀಕ್ಷೆಗೆ 80 ಮಂದಿ ಹಾಜರಾಗಿದ್ದು ಶೇ. 100 ಫಲಿತಾಂಶ ದಾಖಳಾಗಿದೆ. 3 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ 102 ಮಂದಿ ಹಾಜರಾಗಿದ್ದು, 83 ಮಂದಿ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂಪಾಜೆ- ಕಲಾ ವಿಭಾಗವನ್ನು ಮಾತ್ರ ಹೊಂದಿರುವ ಇಲ್ಲಿ ಪರೀಕ್ಷೆಗೆ ಹಾಜರಾಗಿದ್ದು 49 ಮಂದಿ. ಶೇ. 100 ಫಲಿತಾಂಶ ಇಲ್ಲಿ ದಾಖಲಾಗಿದೆ. ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು, ಸುಳ್ಯ- ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದವರು- 75. ಉತ್ತೀರ್ಣ- 55, ಇಬ್ಬರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗ (ಎಸ್‌ಇಬಿಎ)ದಲ್ಲಿ ಪರೀಕ್ಷೆಗೆ ಹಾಜರಾದವರು- 62. ಉತ್ತೀರ್ಣ- 56. ಆರು ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗ (ಸಿಇಬಿಎ)ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದವರು- 43, 35 ಮಂದಿ ಉತ್ತೀರ್ಣರಾಗಿದ್ದು, 3 ಮಂದಿ ವಿಶಿಷ್ಟ ಶ್ರೇಣಿ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ 29 ಮಂದಿ ಹಾಜರಾಗಿದ್ದು, 23 ಮಂದಿ ಉತ್ತೀರ್ಣರಾಗಿದ್ದಾರೆ. ಹರಿಹರ ಪಲ್ಲತ್ತಡ್ಕ ಪದವಿಪೂರ್ವ ಕಾಲೇಜು- ಕಲಾ ವಿಭಾಗ ಶೇ.100 ಫಲಿತಾಂಶ ದಾಖಲಾಗಿದೆ.