ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಯೋಗೀಶ್ ಭಟ್, ಪಾಲೇಮಾರ್, ಕೋಟ್ಯಾನ್ ಸೋಲು

Lingaraj Badiger
Updated On : 9 May 2013, 11:50 am

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಸೋತ, ಗೆದ್ದ ಪ್ರಮುಖರ ವಿವರ ಇಲ್ಲಿದೆ. ಬಿಜೆಪಿಯ ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್, ಮಾಜಿ ಸಚಿವ ಕೃಷ್ಣಪಾಲೇಮಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಸೋಲು ಕಂಡಿದ್ದಾರೆ.
 ಕಾಂಗ್ರೆಸ್ ಮುಖ್ಯ ಸಚೇತಕ ಅಭಯಚಂದ್ರ ಜೈನ್, ಶಾಸಕ ಯು.ಟಿ. ಖಾದರ್, ವಸಂತ ಬಂಗೇರ, ಶಕುಂತಳಾ ಶೆಟ್ಟಿ ಗೆಲವು ಸಾಧಿಸಿದ್ದಾರೆ. ಮಂಗಳೂರು ದಕ್ಷಿಣದಲ್ಲಿ ಯೋಗೀಶ್ ಭಟ್ ಹಾಗೂ ಮಂಗಳೂರು ಉತ್ತರದಲ್ಲಿ ಕೃಷ್ಣಪಾಲೇಮಾರ್‌ಗೆ ಅನಿರೀಕ್ಷಿತ ಸೋಲು. ಕೂದಲಂತರದಲ್ಲಿ ಗೆಲವಿನ ನಿರೀಕ್ಷೆ ಇವರಲ್ಲಿತ್ತು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್‌ಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು ಕೊನೆಕ್ಷಣದಲ್ಲಿ. ಜಿದ್ದಾಜಿದ್ದಿ ಹೋರಾಟದಲ್ಲಿ ಸೋತದ್ದೂ ಕೊನೆಕ್ಷಣದಲ್ಲಿ. ಮೂಡುಬಿದಿರೆಯಲ್ಲಿ ಕಾಂಗ್ರೆಸ್‌ನ ಅಭಯಚಂದ್ರ ಜೈನ್ ಗೆಲವಿನ ಅಂತರ 4,550.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದನದಲ್ಲಿ ಗರಿಷ್ಠ ಪ್ರಶ್ನೆ ಕೇಳಿದ ಯು.ಟಿ.ಖಾದರ್ 3ನೇ ಅವಧಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಚುನಾವಣೆ ಸನಿಹಕ್ಕೆ ಬರುವಾಗ ಕಾಂಗ್ರೆಸ್ ಸೇರಿದ್ದ ಶಕುಂತಳಾ ಶೆಟ್ಟಿಗೂ ಅಚ್ಚರಿಯ ಗೆಲವು.
ಪಕ್ಷೇತರಗಿಲ್ಲ ಠೇವಣಿ: ಪಕ್ಷೇತರರ ಪೈಕಿ ಸುಳ್ಯದಲ್ಲಿ ಮಾಜಿ ಶಾಸಕ ಕುಶಲ ಠೇವಣಿ ಕಳಕೊಂಡಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಪಕ್ಷೇತರರೂ ಇಡುಗಂಟು ಕಳಕೊಂಡಿದ್ದಾರೆ. ಕೆಜೆಪಿ ಸೇರಿದ್ದ ಕುಶಲ ತನಗೆ ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರಿಗೆ ಸಿಕ್ಕಿದ ಮತ ಕೇವಲ 705. ದ.ಕ.ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಲೆಕ್ಕಕ್ಕೆ ಮಾತ್ರ ಎಂಬಂತಾಗಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement