ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕರ್ಣಾಟಕ ಬ್ಯಾಂಕ್ ವ್ಯವಹಾರ ಗುರಿ ರು. 7800

Vishwanath S
Updated On : 10 May 2013, 12:21 pm

ಮಂಗಳೂರು: ಕರ್ಣಾಟಕ ಬ್ಯಾಂಕ್ ಮಂಗಳೂರು ವಲಯ ಶಾಖೆ ಮುಖ್ಯಸ್ಥರ ಸಮ್ಮೇಳನ ಸೋಮವಾರ ನಡೆಯಿತು. ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ಮಾತನಾಡಿ, 2013-14ರಲ್ಲಿ ಬ್ಯಾಂಕ್ 7,800 ಕೋಟಿ ವ್ಯವಹಾರ ಗುರಿ ಹೊಂದುವ ಮಹತ್ವಾಕಾಂಕ್ಷೆ ಹೊಂದಿದೆ. ಬ್ಯಾಂಕ್ ಬೆಳವಣಿಗೆಗೆ ಪೂರಕವಾಗಿ ಎಲ್ಲ ಶಾಖೆ ಮುಖ್ಯಸ್ಥರು ಮಹತ್ವ ಪಾತ್ರ ವಹಿಸುವಂತೆ ಸಲಹೆ ಮಾಡಿದರು. ಈಗ 553 ಶಾಖೆ ಮತ್ತು 510 ಎಟಿಎಂ ಹೊಂದಿದ್ದು, ಹಣಕಾಸು ವರ್ಷಾಂತ್ಯದಲ್ಲಿ 600 ಶಾಖೆಗಳು ಹಾಗೂ 600 ಎಟಿಎಂ ಹೊಂದಲಿದೆ ಎಂದರು.
ಮಹಾಪ್ರಬಂಧಕ ಎಂ.ಎಸ್.ಮಹಾಬಲೇಶ್ವರ ಭಟ್ ಮಾತನಾಡಿ, ಬ್ಯಾಂಕ್‌ನ ಮಂಗಳೂರು ವಲಯದ ಸಾಧನೆಗಳು ಗಮನಾರ್ಹವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಶಾಖೆ ಮುಖ್ಯಸ್ಥರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ ಎಂದರು.
ಉಪಮಹಾಪ್ರಬಂಧಕ ಎಚ್.ಎಸ್.ರುದ್ರಯ್ಯ ಮಾತನಾಡಿ, ಉತ್ತಮ ಠೇವಣಿ ಸಂಗ್ರಹಣೆ ಮತ್ತು ಅದಕ್ಕೆ ಪೂರಕವಾಗಿ ಸಾಲ ವಿತರಣೆ ಶೀಘ್ರಗತಿಯಲ್ಲಿ ಮಾಡಿ ಬ್ಯಾಂಕ್ ಎಲ್ಲ ರಂಗಗಳಲ್ಲಿಯೂ ಹೆಚ್ಚಿನ ಜನಪ್ರಿಯತೆ ಗಳಿಸುವಲ್ಲಿ ಶಾಖೆ ಪ್ರಬಂಧಕರು ಕಾರ್ಯೋನ್ಮುಖರಾಗಬೇಕು ಎಂದರು.  ಮಂಗಳೂರು ವಲಯ ಮುಖ್ಯಸ್ಥ ಎಚ್.ಪಿ.ಆರ್. ಹಂದೆ ಸ್ವಾಗತಿಸಿದರು. ಮುಖ್ಯಪ್ರಬಂಧಕ ಜಿ.ಎಂ.ನಾಗೇಶ್ ರಾವ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement