ಕ್ಷುಲ್ಲಕ ವಿಚಾರಕ್ಕೆ 2 ಪಕ್ಷಗಳ ಕಾರ್ಯಕರ್ತರ ನಡುವೆ ಜಗಳ
ಬಂಟ್ವಾಳ: ಕ್ಷುಲ್ಲಕ ವಿಚಾರದಲ್ಲಿ 2 ಪಕ್ಷಗಳ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡ ಘಟನೆ ಬುಧವಾರ ರಾತ್ರಿ ಕಲ್ಲಡ್ಕದಲ್ಲಿ ನಡೆದಿದೆ. ಈ ಬಗ್ಗೆ ಕೊಳಕೀರು ಬೋರುಗುಡ್ಡೆ ನಿವಾಸಿ ಅಬ್ದುಲ್ ಕರೀಂ ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ಗುರುವಾರ ದೂರು ನೀಡಿದ್ದು, ಎಸ್‌ಡಿಪಿಐ ಸಂಘಟನೆಯ ಜಬ್ಬಾರ್, ಮಲಿಕ್, ರವೂಫ್, ಫಾರೂಕ್ ಎಂಬವರನ್ನು ಆರೋಪಿಗಳು ಎಂದು ಹೆಸರಿಸಿದ್ದಾರೆ. 8ರಂದು ರಾತ್ರಿ ಮಹಮ್ಮದ್ ಹನೀಫ್‌ರೊಂದಿಗೆ ಹೋಗುವಾಗ ನಾಲ್ವರು ನಮ್ಮನ್ನು ತಡೆದು ನಿಲ್ಲಿಸಿ, ಕಾಂಗ್ರೆಸ್‌ನಲ್ಲಿ ಭಾರೀ ಕೆಲಸ ಮಾಡುತ್ತೀರಾ ಎಂದು ಪ್ರಶ್ನಿಸಿ, ಮರದ ರೀಪಿನಿಂದ ಹಲ್ಲೆ ನಡೆಸಿ ರಕ್ತಗಾಯಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.