ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಆತ್ಮಶಕ್ತಿ ಶಿಕ್ಷಣ ವಿಶೇಷಾಂಕ ಬಿಡುಗಡೆ

Vishwanath S
Updated On : 12 May 2013, 11:05 am

ಮಂಗಳೂರು: ಪ್ರಸಕ್ತ ಕಾಲದಲ್ಲಿ ವಿದ್ಯೆ ಎಲ್ಲರ ಹಕ್ಕಾಗಿದೆ. ವಿದ್ಯಾರ್ಥಿಗಳು ಸಾಧನೆ ತೋರಿದ ವ್ಯಕ್ತಿಗಳ ಬಗ್ಗೆ ಸ್ಪೂರ್ತಿ ಪಡೆದು, ತಮ್ಮ ಭವಿಷ್ಯದ ಬದುಕಿನ ಕುರಿತು ಯೋಚಿಸುವ ಅಗತ್ಯವಿದೆ ಎಂದು ಕೈರಂಗಳ ಪಿಎ ಎಂಜಿನಿಯರಿಂಗ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸರೋಜಿನಿ ಬಿ.ಕೆ ಹೇಳಿದ್ದಾರೆ.
ಶನಿವಾರ ಪ್ರೆಸ್ ಕ್ಲಬ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಆತ್ಮಶಕ್ತಿ ಶಿಕ್ಷಣ ವಿಶೇಷಾಂಕ ಬಿಡುಗಡೆಗೊಳಿಸಿ ಮಾತನಾಡಿದರು.
ಸಂಚಿಕೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಮತ್ತು ಪದವಿ ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದಾದ ವಿವಿಧ ಕಾಲೇಜುಗಳ ವಿವರಗಳಿವೆ. ಶಿಕ್ಷಣದ ಕುರಿತು ತಜ್ಞರ ಲೇಖನವಿದೆ ಎಂದರು. 2013ನೇ ಸಾಲಿನಲ್ಲಿ ಆತ್ಮಶಕ್ತಿ ನಡೆಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸಂತ ಜೋಸೆಪ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪವಿತ್ರಾ, ಮಂಗಳೂರು ವಿಶ್ವವಿದ್ಯಾಲಯದ ಎಂಸಿಜೆ ವಿದ್ಯಾರ್ಥಿನಿ ನಫೀಸಾ ಇವರಿಗೆ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಪ್ರಮಾಣ ಪತ್ರ ನೀಡಿದರು.
ಗೋಷ್ಠಿಯಲ್ಲಿ ಸಂಪಾದಕ ಮಂಡಳಿ ಸದಸ್ಯ ಮುದ್ದು ಮೂಡುಬೆಳ್ಳೆ, ಕೆ. ಪ್ರಧಾನ ಸಂಪಾದಕ ಕೆ. ವಾಮನ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement