ಚೇಳೈರು: 14ರಂದು 'ಅಗೋಳಿ ಮಂಜಣ್ಣ ನಾಯ್ಗೆರ್ ನೆಂಪು'
ಮಂಗಳೂರು: ಚೇಳೈರು ಗುತ್ತು ಅಗೋಳಿ ಮಂಜಣ್ಣ ಟ್ರಸ್ಟ್ ವತಿಯಿಂದ ಮೇ 14ರಂದು ಸಂಜೆ 5ಕ್ಕೆ ಚೇಳೈರು ಗುತ್ತು ಚಾವಡಿಯಲ್ಲಿ 'ಅಗೋಳಿ ಮಂಜಣ್ಣ ನಾಯ್ಗೆರ್ ನೆಂಪು' ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಉದ್ಘಾಟಿಸಲಿದ್ದು, ನಿವೃತ್ತ ನ್ಯಾಯಾಧೀಶ ಕೆ. ಉಮೇಶ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪಕಾರ್ಯದರ್ಶಿ ಕೆ. ಸುಧಾಕರ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಪಾಲ್ಗೊಳ್ಳುವರು ಎಂದು ಟ್ರಸ್ಟ್ನ ಅಧ್ಯಕ್ಷ ಎಸ್.ಆರ್. ಹೆಗ್ಡೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸಾಹಿತಿ ಇಂದಿರಾ ಹೆಗ್ಗಡೆ ಮಾತನಾಡಿ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.