ಮಕ್ಕಳ ರಂಗ ನಾಟಕ ಶಿಬಿರ ಸಮಾರೋಪ
ಬಂಟ್ವಾಳ: ಮಂಚಿ- ಕುಕ್ಕಾಜೆ ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್, ರಂಗಾಯಣ ಶಿವಮೊಗ್ಗ ಹಾಗೂ ಸಮಸಂಪ್ರಾತಿ ವಿಟ್ಲ ಸಹಯೋಗದೊಂದಿಗೆ ಕುಕ್ಕಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿ.ವಿ. ಕಾರಂತರ ನೆನಪಿನ ಮಕ್ಕಳ ರಂಗ ನಾಟಕ ಶಿಬಿರದ ಸಮಾರೋಪ ಸಮಾರಂಭ ಹಾಗೂ ನಾಟಕ ಪ್ರದರ್ಶನ ಇತ್ತೀಚೆಗೆ ನಡೆಯಿತು.
ಬೆಂಗಳೂರು ಬಾಬುಕೋಡಿ ಪ್ರತಿಷ್ಠಾನ ಅಧ್ಯಕ್ಷ ಜಯರಾಂ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ನಾಟಕ ವಿನ್ಯಾಸಗಾರ ಮೋಹನ ಸೋನ ಮಾತನಾಡಿದರು. ಯಕ್ಷಲೋಕ ನಿರ್ದೇಶಕ ಗೋಪಾಲ ಅಂಚನ್, ಸಿ.ವಿ. ಗೋಪಾಲಕೃಷ್ಣ ಕೆಲಿಂಜ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಅತಿಥಿಗಳಾಗಿದ್ದರು. ಶಿಬಿರದ ನಿರ್ದೇಶಕ ಮೂರ್ತಿ ದೇರಾಜೆ ಪ್ರಸ್ತಾಪಿಸಿದರು. ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಸ್ವಾಗತಿಸಿದರು. ಉಮಾನಾಥ ರೈ ನಿರೂಪಿಸಿದರು. ರಮಾನಂದ ವಂದಿಸಿದರು. ಬಳಿಕ ಮೂರ್ತಿ ದೇರಾಜೆ ಮತ್ತು ಶಂಕರ ಪ್ರಸಾದ್ ನಿರ್ದೇಶನದಲ್ಲಿ ಶಿಬಿರದಲ್ಲಿ ರಚನೆಗೊಂಡ ಬಾರಯ್ಯ ಬೆಳದಿಂಗಳೇ ಮಕ್ಕಳ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಪ್ರೊ.ಎ.ಪಿ. ರಾವ್, ಗೋಪಾಲ ಅಂಚನ್, ಮೌನೇಶ್ ವಿಶ್ವಕರ್ಮ, ನಾಗರಾಜ ಪದಕಣ್ಣಾಯ, ನಾರಾಯಣ ಜಿ., ಸುಜಾತ, ಮಹಮ್ಮದ್ ಬಿ., ಶಾರದಾ ಎಸ್.ರಾವ್, ಜಗನ್ನಾಥ, ಉಮಾನಾಥ ರೈ, ತಾರಾನಾಥ್ ಕೈರಂಗಳ, ಸುಧೀರ್ ಬಾಳೆಪುಣಿ, ಬಾಲಕೃಷ್ಣ ಶೆಟ್ಟಿ, ಜ್ಯೂನಿಯರ್ ಶಂಕರ್ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.