ಮಾಣಿ: 22ರಂದು 3.75 ಕೋಟಿ ವೆಚ್ಚದ ಸಭಾಭವನ ಲೋಕಾರ್ಪಣೆ
ಕ.ಪ್ರ. ವಾರ್ತೆ ವಿಟ್ಲ ಮೇ 12-
ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ವಠಾರದಲ್ಲಿ 3.75 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸಭಾಭವನವನ್ನು ಮೇ 19ರಿಂದ ಮೇ 22ರ ತನಕ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಗೊಳಿಸಲಾಗುವುದು ಎಂದು ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಹಾಗೂ ಮಾಣಿ ಮಠದ ಆಡಳಿತ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ತಿಳಿಸಿದ್ದಾರೆ.
ಬ್ರಹ್ಮೈಕ್ಯರಾದ ಶ್ರೀ ರಾಘವೇಂದ್ರ ಭಾರತಿ ಸ್ವಾಮೀಜಿ 1967ರಲ್ಲಿ ಮಾಣಿಯ ಪೆರಾಜೆಯಲ್ಲಿ ಭೂಮಿ ಖರೀದಿಸಿ, 1973ರಲ್ಲಿ ಮಠ ನಿರ್ಮಿಸಿದರು. 1989ರಲ್ಲಿ ವೇದ ಪಾಠಶಾಲೆ ಆರಂಭವಾಯಿತು. 36ನೇ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಉಪಸ್ಥಿತಿಯಲ್ಲಿ 2003ರಲ್ಲಿ ಆಂಜನೇಯನ ಗುಡಿ ನಿರ್ಮಾಣವಾಗಿದೆ. ಇಲ್ಲಿ ಗೋಶಾಲೆ, ಕೃಷಿ ಭೂಮಿ ಇದ್ದು, ವಾರ್ಷಿಕೋತ್ಸವ, ಧರ್ಮೋಪನಯನ ನಡೆಯುತ್ತದೆ. ಇದೀಗ 2013ರಲ್ಲಿ ನೂತನ ಸಭಾಭವನ ಲೋಕಾರ್ಪಣೆಗೊಳ್ಳುತ್ತಿದೆ. 19ರಂದು ಬೆಳಗ್ಗೆ 9ರಿಂದ ಕರ ಸೇವೆ ನಡೆಯಲಿದೆ. 20ರಂದು ರುದ್ರ ಪಠನ ಕಾರ್ಯಕ್ರಮವಿದೆ. 21ರಂದು ಶ್ರೀಕರಾರ್ಚಿತ ಪೂಜೆ, ಮೇ 22ರಂದು ಸಾಮೂಹಿಕ ಉಪನಯನ, ಶ್ರೀಕರಾರ್ಚಿತ ಪೂಜೆ, ಶತರುದ್ರ ಪಾರಾಯಣ, 2 ಗಂಟೆಗೆ ಶ್ರೀಗಳ ಸಾನ್ನಿಧ್ಯದಲ್ಲಿ ಸಭಾಭವನ ಲೋಕಾರ್ಪಣೆಯ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಮಠದ ಸರ್ವಾಧ್ಯಕ್ಷ ಟಿ. ಮಡಿಯಾಲ್, ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ಕ್ಷೇತ್ರದ ಧರ್ಮಕರ್ತ ಭೀಮೇಶ್ವರ ಜೋಷಿ, ಕೋಲ್ಕತ್ತಾ ಇಮಾಮಿ ಗ್ರೂಪ್ಸ್ನ ಆರ್.ಎಸ್. ಗೋಯಂಕಾ, ಎಂ.ಎನ್. ಭಟ್ ಮದ್ಗುಣಿ, ಸಿ.ಎಂ. ದಿವಾಕರ ಶಾಸ್ತ್ರಿ, ಕೆ.ಜಿ. ಭಟ್, ವಿ.ವಿ. ಭಟ್, ಟಿ. ಶ್ಯಾಮ ಭಟ್, “OÚ«ÚsÚ®ÚÃºÚ ಮತ್ತು ಸುವರ್ಣ «ÚàÀÑé’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಆರ್.ಎಸ್. ಹೆಗಡೆ, ಎಸ್.ಜಿ. ಹೆಗಡೆ, ಕೆ. ರಾಮ ಭಟ್ ಉರಿಮಜಲು, ಎಂ.ಕೆ. ಜನಾರ್ದನ, ಯಮುನಾ ಭಾಗ್ವತ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.