ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾಸರಗೋಡು ಚಿನ್ನ, ಅಂಧರ ತರಬೇತಿ ಸಂಸ್ಥೆಗೆ ವಂದನಾ ಪ್ರಶಸ್ತಿ

Mainashree
Updated On : 15 May 2013, 11:22 am

ಮಂಗಳೂರು: ಸೆಂಟ್ರಲ್ ರೋಟರಿ ಮತ್ತು ಸಿಟಿ ರೋಟರ್ಯಾಕ್ಟ್ ವತಿಯಿಂದ ವೃತ್ತಿಪರ ಸೇವಾಯೋಜನೆಗಾಗಿ ನೀಡುವ ವಂದನಾ ಪ್ರಶಸ್ತಿಗೆ ಕಾಸರಗೋಡು ಚಿನ್ನ ಮತ್ತು ಅಂಧರ ಚಲನವಲನ ತರಬೇತಿ ಸಂಸ್ಥೆ ಆಯ್ಕೆಯಾಗಿದೆ. ಸಂಸ್ಥೆ ಪರವಾಗಿ ಕಾರ್ಯದರ್ಶಿ ಸೂರ್ಯಪ್ರಕಾಶ್ ಭಟ್ ಪ್ರಶಸ್ತಿ ಸ್ವೀಕರಿಸುವರು. ರೋಟರಿ ಬಾಲಭವನದಲ್ಲಿ ಮೇ 17ರಂದು ಸಂಜೆ 8 ಗಂಟೆಗೆ ನಡೆಯುವ ಸಮಾರಂಭದಲ್ಲಿ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಶಸ್ತಿ ಪ್ರದಾನ ಮಾಡುವರು. ರೋಟರಿ ಸಹಾಯಕ ಗವರ್ನರ್ ಸದಾಶಿವ ಶೆಟ್ಟಿ, ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ಶೈಲೇಂದ್ರ ರಾವ್ ಭಾಗವಹಿಸುವರು. ರೋಟರಿ ಅಧ್ಯಕ್ಷ ಡಾ.ಸುರೇಶ್ಚಂದ್ರ ಶೆಟ್ಟಿ, ರೋಟರಿ ಜಿಲ್ಲಾ ಗವನರ್ನರ್ ಡಾ.ಬಿ.ದೇವದಾಸ ರೈ, ಕಾರ್ಯದರ್ಶಿ ಅನಿಲ್ ಗೋನ್ಸಾಲಿಸ್, ರೋಟರ್ಯಾಕ್ಟ್ ಅಧ್ಯಕ್ಷ ವಿಕ್ರಮ್ ಕುಟಿನ್ಹ, ಕಾರ್ಯದರ್ಶಿ ಪ್ರಸಾದ್ ಭಾಗವಹಿಸುವರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement