ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ, ಪುರಸ್ಕಾರ ಪ್ರಕಟ

Mainashree
Updated On : 15 May 2013, 11:25 am

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2012 ಮತ್ತು 2013ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುರಸ್ಕಾರ ಪ್ರಕಟಿಸಲಾಗಿದ್ದು, 6 ಮಂದಿಗೆ ಗೌರವ ಪ್ರಶಸ್ತಿ ಮತ್ತು ಐವರಿಗೆ ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ 18ರಂದು ಸಂಜೆ 4ಕ್ಕೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬ್ಯಾರಿ ಭಾಷೆ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ 2012ನೇ ಸಾಲಿನ ಗೌರವ ಪ್ರಶಸ್ತಿಗೆ ಇಸ್ಮಾಯಿಲ್ ಮುಸ್ಲಿಯಾರ್, ಡಾ.ಬಿ.ಕೆ.ಯೂಸುಫ್ ಮತ್ತು ಮಹಮ್ಮದ್ ಬ್ಯಾರಿ ಬಡ್ಡೂರು, 2013ನೇ ಸಾಲಿನ ಗೌರವ ಪ್ರಶಸ್ತಿಗೆ ರಝೂಕ್ ಹಾಜಿ ಹರೇಕಳ, ಮಹಮ್ಮದ್ ಚಿಕ್ಕಮಗಳೂರು, ಬಶೀರ್ ಬೈಕಂಪಾಡಿ ಆಯ್ಕೆಯಾಗಿದ್ದಾರೆ.
ಎರಡು ವರ್ಷದ ಗೌರವ ಪುರಸ್ಕಾರಕ್ಕೆ ಅಬ್ದುಲ್ ಖಾದರ್ ಹಾಜಿ, ಡಾ.ಕಾಪು ಮಹಮ್ಮದ್, ಬಿ.ಎಂ.ಮುಮ್ತಾಜ್ ಆಲಿ, ಚಾರ್ಮಾಡಿ ಹಸನಬ್ಬ ಹಾಗೂ ಝಕಾರಿಯಾ ವೇಣೂರ ಅವರನ್ನು ಆರಿಸಲಾಗಿದೆ.
ಪ್ರಶಸ್ತಿ ರು. 10 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಸಂಜೆ 3ಕ್ಕೆ ಸಾಂಸ್ಕೃತಿಕ ಜಾಥಾವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನಾ ಉದ್ಘಾಟಿಸುವರು.
ಜಾಥಾ ಬಿಎಡ್ ಕಾಲೇಜಿನಿಂದ ಸ್ಟೇಟ್‌ಬ್ಯಾಂಕ್ ಮುಖೇನ ಪುರಭವನಕ್ಕೆ ಆಗಮಿಸಲಿದೆ. ಕೋಲ್ಕಲಿ, ಒಪ್ಪನ, ದಫ್, ತಾಲೀಮ್, ಚೀನೀ ಬ್ಯಾಂಡ್, ಆಕರ್ಷಕ ಬ್ಯಾರಿ ಜಾನಪದ ತಂಡ ಜಾಥಾಕ್ಕೆ ಮೆರುಗು ನೀಡಲಿದೆ. ಬಳಿಕ ಪುರಭವನದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ ಆಳ್ವ ಉದ್ಘಾಟಿಸಲಿದ್ದಾರೆ ಎಂದರು.
ಹಿರಿಯ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ಪ್ರಶಸ್ತಿ ಪ್ರದಾನ ಮಾಡುವರು. ಕರಾವಳಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಗಣೇಶ್ ರಾವ್ ಪುರಸ್ಕರಿಸುವರು. ಜಿಲ್ಲೆಯ ಶಾಸಕರು, ಇತರೆ ಗಣ್ಯರು ಹಾಜರಿರುವರು ಎಂದು ತಿಳಿಸಿದರು.
ಸದಸ್ಯರಾದ ಜಮಾಲುದ್ದೀನ್, ಮಹಮ್ಮದ್ ಕಲ್ಲಡ್ಕ, ರಿಜಿಸ್ಟ್ರಾರ್ ಉಮರಬ್ಬ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement