ಕರ್ಣಾಟಕ ಬ್ಯಾಂಕ್ 348 ಕೋಟಿ ನಿವ್ವಳ ಲಾಭ: ಜಯರಾಮ್ ಭಟ್
ಮಂಗಳೂರು: ಖಾಸಗಿ ರಂಗದ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ 2013-14ನೇ ಸಾಲಿನಲ್ಲಿ 348.08 ಕೋಟಿ ನಿವ್ವಳ ಲಾಭ ದಾಖಲಿಸಿದೆ.
ಕಳೆದ ಸಾಲಿನಲ್ಲಿ 246.07 ಕೋಟಿ ನಿವ್ವಳ ಲಾಭ ದಾಖಲಿಸಿದ್ದು, ಈ ವರ್ಷ ಶೇ.42.46 ಏರಿಕೆಯಾಗಿದೆ.
ಬ್ಯಾಂಕ್ ವ್ಯವಹಾರ 61,263.90 ಕೋಟಿ ದಾಟಿದೆ. ವ್ಯವಹಾರದಲ್ಲಿಯೂ ಶೇ.17.07 ಪ್ರಗತಿ ದಾಖಲಿಸಿದೆ. ಬ್ಯಾಂಕ್ ಠೇವಣಿ 31,608.32 ಕೋಟಿಯಿಂದ 36,056.22 ಕೋಟಿಗೆ ಏರಿದೆ. ಸಾಲ ನೀಡಿಕೆ ಪ್ರಮಾಣ 20,720.70 ಕೋಟಿ. ಈ ವಿಭಾಗದಲ್ಲಿಯೇ ಶೇ.21.65 ಏರಿಕೆ ಕಂಡಿದೆ.
ಒಟ್ಟು ಆದಾಯ 4,161.93 ಕೋಟಿ. ಇಲ್ಲೂ ಶೇ.20.73 ಪ್ರಗತಿಯಾಗಿದೆ. ಬ್ಯಾಂಕ್ ಶೇ.40 ಡಿವಿಡೆಂಡ್ ಘೋಷಿಸಿದೆ. ಎನ್ಪಿಎ ಶೇ.2.11ರಿಂದ ಶೇ.1.51 ಇಳಿದಿದ್ದು ಉತ್ತಮ ಸಾಧನೆಯಾಗಿದೆ.
“G«é¯G¾Úᒀ ಉತ್ತಮ ರಿಕವರಿಯಾಗಿದೆ. ಸಾಲದಲ್ಲಿ ಪರಿಣಾಮಕಾರಿ ಪ್ರಗತಿಯಿಂದಾಗಿ ಈ ಬಾರಿ ಸಾರ್ವಕಾಲಿಕ ನಿವ್ವಳ ಲಾಭ 348.08 Ä»Ò¥æ’ ಎಂದು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ತಿಳಿಸಿದ್ದಾರೆ.
ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ ಲಾಭ ಗಳಿಕೆ ಪ್ರಮಾಣ ಹೆಚ್ಚುತ್ತಲೇ ಇತ್ತು. ಬ್ಯಾಲೆನ್ಸ್ ಶೀಟ್ ಶಕ್ತಿಯುತಗೊಳಿಸಲು ಬ್ಯಾಂಕ್ ಸಮರ್ಪಕ ಸುಧಾರಣೆ ಜಾರಿಗೊಳಿಸಿ ಸಾಧಿಸಿದೆ ಎನ್ನುತ್ತಾರೆ ಭಟ್.
ಬ್ಯಾಂಕ್ 20 ರಾಜ್ಯ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಖೆ ತೆರೆದಿದೆ. ಕಳೆದ ಸಾಲಿನಲ್ಲಿ 47 ಹೊಸ ಶಾಖೆ ಮತ್ತು 152 ಎಟಿಎಂಗಳನ್ನು ತೆರೆಯಲಾಗಿದೆ ಎಂದರು.