ಪುತ್ತೂರು ಎಪಿಎಂಸಿ: ರು. 1.21 ಕೋಟಿ ಕ್ರಿಯಾ ಯೋಜನೆಗೆ ತೀರ್ಮಾನ
ಪುತ್ತೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು 2012-13ನೇ ಸಾಲಿನಲ್ಲಿ ಒಟ್ಟು ರು. 2.63 ಕೋಟಿ ಆದಾಯ ಗಳಿಸಿದ್ದು, ಈ ಪೈಕಿ ರು. 1.42 ಕೋಟಿ ಖರ್ಚಾಗಿದೆ. ಉಳಿಕೆ ರು. 1.21 ಕೋಟಿಯಲ್ಲಿ ಮುಂದಿನ ದಿನಗಳಲ್ಲಿ ಕೃಷಿಕರಿಗೆ ಹಾಗೂ ವರ್ತಕರಿಗೆ ಅನುಕೂಲವಾಗುವ ಯೋಜನೆಯ ಕ್ರಿಯಾಯೋಜನೆ ರೂಪಿಸುವುದೆಂದು ಬುಧವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ಎಪಿಎಂಸಿ ಸಾಮಾನ್ಯ ಸಭೆ, ಅಧ್ಯಕ್ಷ ಕೃಷ್ಣ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
2012-13ನೇ ಸಾಲಿನ ಸಾಮಾನ್ಯ ನಿಧಿ ಮುಂಗಡಪತ್ರಕ್ಕೆ ಸಂಬಂಧಿಸಿ ಮರುಹೊಂದಾಣಿಕೆ ಮಾಡಬಹುದಾದ ಹಾಗೂ ಮಂಜೂರಾತಿಗಿಂತ ಕಡಿಮೆ ವೆಚ್ಚವಾಗಿರುವ ಹಾಗೂ ಹೆಚ್ಚುವರಿ ವೆಚ್ಚವಾಗಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಮರುಹೊಂದಾಣಿಕೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಎಪಿಎಂಸಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ಸದಸ್ಯರಾದ ಸೀತಾರಾಮ ಗೌಡ, ಸೋಮನಾಥ, ಪ್ರಮೋದ್ ಕೆ.ಎಸ್., ಅಬ್ದುಲ್ ಶಕೂರ್, ತ್ರಿವೇಣಿ ಕರುಣಾಕರ, ಸಾಜ ರಾಧಾಕೃಷ್ಣ ಆಳ್ವ, ಶೀನಪ್ಪ ಗೌಡ, ಗುರುನಾಥ ಗೌಡ, ಕೃಷ್ಣ ನಾಯ್ಕ್, ಮನೋಹರ ರೈ, ಸಹಾಯಕ ಕಾರ್ಯದರ್ಶಿ ಜಿ.ಎಸ್. ಹೆಗಡೆ, ಜಿಲ್ಲಾ ಸಹಾಯಕ ನಿರ್ದೇಶಕ ಎಸ್.ಎ. ಮಹಾಲೆ, ಲೆಕ್ಕಿಗ ರಾಮಚಂದ್ರ, ಸಹಾಯಕ ಎಂಜಿನಿಯರ್ ಹಾಸಿಂ ಮಿರ್ಜಾ ಇದ್ದರು.