ಸಂಸದರ ನಿಧಿ ರು. 31.50 ಲಕ್ಷ ಬಿಡುಗಡೆ
ಮಂಗಳೂರು: ಸಂಸತ್ ಸದಸ್ಯರ ಸ್ಥಳೀಯಾಭಿವೃದ್ಧಿ ಯೋಜನೆಯಡಿಯಲ್ಲಿ ಜಿಲ್ಲೆಯ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರ 2012-13ನೇ ಸಾಲಿನ ಮಂಗಳೂರು ತಾಲೂಕಿನ 13 ಕಾಮಗಾರಿಗಳಿಗೆ ಪ್ರಥಮ ಕಂತಿನಲ್ಲಿ ರು. 42ಲಕ್ಷ ಮಂಜೂರಾಗಿದ್ದು, ಅನುದಾನದಲ್ಲಿ ರು. 31.50 ಲಕ್ಷ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಹೇಳಿದ್ದಾರೆ. ತಲಪಾಡಿ ಗ್ರಾಮದ ದೇವಿಪುರ ರಸ್ತೆ ಅಭಿವೃದ್ಧಿಗೆ ರು. 1.50ಲಕ್ಷ, ಕೊಣಾಜೆ ಗ್ರಾಮದ ಅಸೈಗೋಳಿ ಪಟ್ಟೋರಿ ರಸ್ತೆಗೆ ರು. 3.75 ಲಕ್ಷ, ಪೆರ್ಮನ್ನೂರು ಗ್ರಾಮದ ಕುತ್ತಾರ್ ಸಿದ್ಧಿವಿನಾಯಕ ರಸ್ತೆಗೆ ರು. 1.50 ಲಕ್ಷ, ಶ್ರೀ ರಾಜರಾಜೇಶ್ವರಿ ಮಂದಿರ ಹಿಂಬದಿಯ 1ನೇ ಅಡ್ಡರಸ್ತೆಗೆ ರು. 3.75ಲಕ್ಷ, ಪಜೀರು ಗ್ರಾಮದ ಅಗರಮಾರು-ನಾಗಬನ ರಸ್ತೆಗೆ 2.25 ಲಕ್ಷ, ಪುತ್ತಿಗೆ ಗ್ರಾಮಗ ಮರುಕತ್ ರಸ್ತೆಗೆ ರು. 75ಸಾವಿರ, ಕಿನ್ಯಾ ಗ್ರಾಮದ ಕಜೆ- ಸಾಂತ್ಯಗುತ್ತು ರಸ್ತೆಗೆ ರು. 2.25ಲಕ್ಷ ಬಿಡುಗಡೆಗೊಂಡಿದೆ. ಅಡ್ಯಾರ್ ಗ್ರಾಮದ ಪಂಚಾಯ್ತಿ ವ್ಯಾಪ್ತಿಯ ಮಾಂಡೋವಿ ಮೋಟಾರ್ಸ್ ಎದುರಿನ ರಸ್ತೆಯ ಬಳಿ ಕಾಂಕ್ರೀಟೀಕರಣ ಹಾಗೂ ತಡೆಗೋಡೆ ಕಾಮಗಾರಿಗೆ ರು. 2.25ಲಕ್ಷ, ಕಂದಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಲಕಿ ರಸ್ತೆಗೆ ರು. 3ಲಕ್ಷ, ನೀರುಮಾರ್ಗ ಗ್ರಾ.ಪಂ. ಬಂಗಾರದಗುಡ್ಡೆ ರಸ್ತೆಗೆ ರು. 2.25 ಲಕ್ಷ, ತೆಂಕೆಡಪದವು ಗ್ರಾಮದ ಕುದುಂಜೋಡಿ ದಾದಿಯರ ಕೇಂದ್ರದ ಬಳಿಯ ರಸ್ತೆ ಅಭಿವೃದ್ಧಿಗೆ ರು. 2.25 ಲಕ್ಷ ಹಾಗೂ ತಿರುವೈಲು ವಾರ್ಡಿನ ಕಲರೈಕೋಡಿಯ 1ನೇ ಅಡ್ಡರಸ್ತೆ ಕಾಂಕ್ರೀಟೀಕರಣದ ಮುಂದುವರೆದ ಕಾಮಗಾರಿಗಾಗಿ ರು. 3.75 ಲಕ್ಷ ಬಿಡುಗೊಳಿಸಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಚೆಕ್ ವಿತರಿಸಲಾಗಿದೆ ಎಂದರು.