ಸಿದ್ದು ನಿಲುವಿಗೆ ಸಮಿತಿ ಖಂಡನೆ
ಮಂಗಳೂರು: ಗೋಹತ್ಯೆ ನಿಷೇಧದ ಕಾನೂನು ತೆಗೆದು ಹಾಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೀತಿಯನ್ನು ಹಿಂದೂ ಜಾಗೃತಿ ಸಮಿತಿ ಖಂಡಿಸಿದೆ. ಗೋಹತ್ಯೆಯನ್ನು ಕಠೋರವಾಗಿ ವಿಚಾರಿಸುವ 2012ನೇ ಗೋಹತ್ಯಾ ತಿದ್ದುಪಡಿ ಮಸೂದೆಯನ್ನು ತೆಗೆದು ಹಾಕಿ, ಗೋಭಕ್ತರ ಧಾರ್ಮಿಕಭಾವನೆಗೆ ನೋವುಂಟು ಮಾಡಿದ್ದಾರೆ. ಗಾಂಧೀಜಿ ಮತ್ತು ಭಾರತ ಸಂವಿಧಾನ ಗೋಹತ್ಯೆಯನ್ನು ನಿಷೇಧಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗಿಂತ ಅಲ್ಪಸಂಖ್ಯಾತರ ಓಲೈಕೆಗೆ ಜಾಸ್ತಿ ಒತ್ತು ನೀಡಿದೆ ಎಂದು ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಹೇಳಿದ್ದಾರೆ.