ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಲಾಭಾಂಶ, ಹಾಲು ಸಂಗ್ರಹದಲ್ಲಿ ಏರಿಕೆ: ರವಿರಾಜ್ ಹೆಗ್ಡೆ

Vishwanath S
Updated On : 19 May 2013, 11:41 am

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಪ್ರತಿ ದಿನ 2.23 ಲಕ್ಷ ಲೀ. ಹಾಲು ಸಂಗ್ರಹಿಸುವ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.14 ಪ್ರಗತಿ ದಾಖಲಿಸಿದೆ.
 ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲು ಉತ್ಪಾದಕರಿಗೆ ಬೆಂಬಲ ಬೆಲೆ ಘೋಷಿಸಿದ ಬಳಿಕ ಪ್ರತಿ ದಿನ 5 ಸಾವಿ ಲೀ.ಹಾಲು ಹೆಚ್ಚು ಸಂಗ್ರಹವಾಗುತ್ತಿದೆ ಎಂದು ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
 ಕಳೆದ ಸಾಲಿನಲ್ಲಿ ಪ್ರತಿದಿನ 2.88 ಲಕ್ಷ ಲೀ. ಹಾಲು ಮಾರಾಟ ಮಾಡಿದ್ದು, ಈ ಸಾಲಿನಲ್ಲಿ ಪ್ರಮಾಣ 3 ಲಕ್ಷ ಲೀ. ಮೊಸರು ಮಾರಾಟದಲ್ಲಿ ಶೇ.10 ಪ್ರಗತಿ ದಾಖಲಿಸಿದ್ದು, ಪ್ರತಿದಿನ 34,600 ಕಿಲೊ ಮಾರಾಟವಾಗುತ್ತಿದೆ. 2011-12ರ ಸಾಲಿನಲ್ಲಿ ವಾರ್ಷಿಕ ವಹಿವಾಟು 367 ಕೋಟಿ, ಈ ಸಾಲಿನಲ್ಲಿ 451 ಕೋಟಿ ತಲುಪಿದೆ. ಕಳೆದ ಸಾಲಿನಲ್ಲಿ 3.47 ಕೋಟಿ ಲಾಭವಾಗಿದ್ದು, ಈ ಬಾರಿ 3.60 ಕೋಟಿ ಲಾಭ ನಿರೀಕ್ಷಿಸಲಾಗಿದೆ. 2013-14ರಲ್ಲಿ 555 ಕೋಟಿ ವಹಿವಾಟು ನಿರೀಕ್ಷಿಸಲಾಗಿದೆ. ಕಳೆದ ಸಾಲಿನಲ್ಲಿ ನೀಡಲಾದ ಹಾಲು ಪ್ರೋತ್ಸಾಹಧನ 355 ಲಕ್ಷ. ಈ ಸಾಲಿನಲ್ಲಿ 550 ಲಕ್ಷ ಎಂದರು.
 ಮೇವು ಮತ್ತು ಕಾರ್ಮಿಕರ ಕೊರತೆ ಪರಿಗಣಿಸಿ ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡುವ ದೃಷ್ಟಿಯಿಂದ ಹಾಲು ಉತ್ಪಾದಕರಿಗೆ 2 ಕೋಟಿ ಸಹಾಯಧನ ನೀಡಲಾಗಿದೆ. ಅಜೋಲ ಕೃಷಿಗೆ ಆದ್ಯತೆ ನೀಡಿ 150 ಪ್ರಾತ್ಯಕ್ಷಿಕೆ ಘಟಕ ತೆರೆಯಲಾಗಿದೆ.  ಕೇಂದ್ರ ಪುರಸ್ಕೃತ ಶುದ್ಧ ಹಾಲು ಉತ್ಪಾದನೆ ಅನುದಾನ (ಬಿಎಂಸಿ)ದ 54 ಕೇಂದ್ರ ಕಾರ್ಯ ನಿರ್ವಹಿಸಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಗ್ರಹವಾಗುತ್ತಿದೆ. ಮೈಸೂರ್ ಪಾಕ್ ಅಥವಾ ಪೇಡ ಖರೀದಿಸಿ ಚಿನ್ನ ಬೆಳ್ಳಿ ಗೆಲ್ಲುವ ಯೋಜನೆ, 'ನಂದಿನಿ ನಮ್ಮ ಶುಚಿ' ಕಾರ್ಯಕ್ರಮ, ಶಾಲೆ ಮಕ್ಕಳಿಗೆ ಜಾನಪದ ನೃತ್ಯ ಸ್ಪರ್ಧೆ ಆಯೋಜಿಸುವ ಮೂಲಕ ಸಾವಿರಕ್ಕೂ ಹೆಚ್ಚು ಶಾಲೆ ಮಕ್ಕಳು ಭಾಗವಹಿಸಿದ್ದಾರೆ. ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದ್ದೇವೆ ಎಂದರು.
 ಮಂಗಳೂರು ಡೈರಿ ಶೀತಲೀಕರಣ ಸಾಮರ್ಥ್ಯ 4 ಲಕ್ಷ ಲೀ.ಗೆ  ಹೆಚ್ಚಿಸಲಾಗಿದೆ. ತುಪ್ಪ ಪ್ರತಿದಿನ 2ಟನ್ ಉತ್ಪಾದನೆಯಿಂದ 4 ಟನ್‌ಗೆ ಹೆಚ್ಚಿಸಲಾಗಿದೆ. ಬೆಣ್ಣೆ ಮತ್ತು ಐಸ್‌ಕ್ರೀಂ ದಾಸ್ತಾನಿಗೆ ಅಗತ್ಯ ಇರುವ 10 ಸಾವಿರ ಲೀ. ಸಾಮರ್ಥ್ಯದ ಡೀಪ್ ಫ್ರೀಜರ್ ಅಳವಡಿಸಲಾಗಿದೆ.  ರಾಷ್ಟ್ರೀಯ ಹೈನು ಯೋಜನೆಯಡಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲ ಹಳ್ಳಿಗಳಲ್ಲಿ ಹಾಲಿನ ಸಂಘ ರಚನೆಯಾಗಿದೆ. 5 ವರ್ಷದಲ್ಲಿ 30 ಹೊಸ ಹಾಲು ಸಂಘ, 17 ಬಿ.ಎಂ.ಸಿ. ಕೇಂದ್ರ ಒಕ್ಕೂಟಕ್ಕೆ ಲಭಿಸಲಿದೆ.
 ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಪಿ.ಬಿ. ದಿವಾಕರ ರೈ, ಸುಚರಿತ ಶೆಟ್ಟಿ, ಕೆ.ಎನ್.ಹೆಗ್ಡೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement