21, 22ರಂದು ಸಂದರ್ಶನ
ಮಂಗಳೂರು: ಬೆಂಗಳೂರಿನ ಲೀಗಲ್ ಪ್ರೋಸೆಸ್ ಔಟ್ ಸೋರ್ಸಿಂಗ್ ಸಂಸ್ಥೆಯಾದ ಕ್ಲಚ್ ಗ್ರೂಪ್ ಸಂಸ್ಥೆಯು ಹುದ್ದೆಗಳಿಗಾಗಿ ಮೇ 21 ಮತ್ತು 22 ರಂದು ಎಸ್ಡಿಎಂ ಕಾಲೇಜಿನಲ್ಲಿ ಸ್ನಾತಕೋತ್ತರ ಕಾನೂನು ಮತ್ತು ಕಾನೂನು ಪದವೀದರರ ಸಂದರ್ಶನ ನಡೆಸಲಿದೆ. ಸಂಸ್ಥೆಯು ಅಭ್ಯರ್ಥಿಗಳಿಗೆ ಲಿಖಿತ ಹಾಗೂ ಮೌಖಿಕ ಪ್ರಕ್ರಿಯೆಗಳ ಮೂಲಕ ಸಂದರ್ಶನ ನಡೆಸಲಿದೆ.ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಪದ್ಮಶ್ರೀ ಆಳ್ವ- 9035002435 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
2.41 ಲಕ್ಷ ಜನರಿಂದ ಆಧಾರ್ ನೋಂದಣಿ
ಮಂಗಳೂರು: ಜಿಲ್ಲೆಯಲ್ಲಿ ಆಧಾರ್ ಗುರುತಿನ ಚೀಟಿ ನೋಂದಣಿ ಕಾರ್ಯ ಮಂಗಳೂರು, ಮೂಡುಬಿದಿರೆ, ಬಂಟ್ವಾಳ, ವಿಟ್ಲ ಮತ್ತು ಪುತ್ತೂರುಗಳಲ್ಲಿ ಕಳೆದ ಡಿಸೆಂಬರ್ಗೆ ಕಾರ್ಯಾರಂಭವಾಗಿದ್ದು, 16 ಕೇಂದ್ರಗಳಲ್ಲಿ ಇಲ್ಲಿವರೆಗೆ ಒಟ್ಟು 2,41,809 ಮಂದಿ ತಮ್ಮ ಹೆಸರನ್ನು ಹಾಗೂ ವೈಯಕ್ತಿಕ ಮಾಹಿತಿಯನ್ನು ಕಾರ್ಡ್ ಪಡೆಯಲು ನೋಂದಾಯಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.