ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಾವಿಗೆ ಬಿದ್ದ ಕಡವೆ ಕೊನೆಗೂ ಪಾರು

Lingaraj Badiger
Updated On : 20 May 2013, 11:37 am

ಮಂಗಳೂರು: ತೆರೆದ ಬಾವಿಗೆ ಬಿದ್ದ ಕಡವೆಯನ್ನು ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕದಳ ಸೇರಿ ರಕ್ಷಿಸಿದ ವಿದ್ಯಮಾನ ಭಾನುವಾರ ನಗರದ ಲ್ಯಾಂಡ್ಲಿಂಕ್ಸ್ನಲ್ಲಿ ನಡೆದಿದೆ. ಕಡವೆಯೊಂದು ಶನಿವಾರ ತೆರೆದ ಬಾವಿಗೆ ಬಿದ್ದಿತ್ತು. ಬಾವಿಯಲ್ಲಿ ಕುತ್ತಿಗೆ ತನಕ ನೀರಿದ್ದುದರಿಂದ ಮುಳುಗುವ ಅಪಾಯದಿಂದ ತಪ್ಪಿದರೂ ಮೇಲೆ ಬರಲು ಸಾಧ್ಯವಿರಲಿಲ್ಲ. ಭಾನುವಾರ ಮಧ್ಯಾಹ್ನ ಸಮೀಪದ ಡಾ.ಕುಮಾರಸ್ವಾಮಿ ಎಂಬವರು ತಮ್ಮ ಪಂಪ್ಹೌಸ್ಗೆ ಆ ದಾರಿಯಲ್ಲಿ ಬರುತ್ತಿದ್ದಾಗ ಆಕಸ್ಮಿಕವಾಗಿ ಬಾವಿಯಲ್ಲಿ ಕಡವೆ ಇರುವುದು ಪತ್ತೆಯಾಗಿತ್ತು. ಕೂಡಲೇ ಅವರು ಕದ್ರಿಯ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು.
   ಅಗ್ನಿಶಾಮಕ ಅಧಿಕಾರಿಗಳು ಅರಣ್ಯ ಇಲಾಖೆಯ ಗಮನಕ್ಕೆ ತಂದು ಪಿಲಿಕುಳ ನಿಸರ್ಗಧಾಮ ಅಧಿಕಾರಿಗಳನ್ನು ಕರೆಸಿದರು.
 ಬಾವಿಯಲ್ಲಿದ್ದ ಕಡವೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಅಗ್ನಿಶಾಮಕದಳ ಸಿಬ್ಬಂದಿಗಳು ಏಣಿ ಮುಖೇನ ಹಗ್ಗದ ಸಹಾಯದಿಂದ ಅರ್ಧ ಗಂಟೆ ಕಾರ್ಯಾಚರಣೆಯಲ್ಲಿ ಕಡವೆ ಮೇಲೆತ್ತಿದರು. ಬಳಿಕ ಕಡವೆಯನ್ನು ಪಿಲಿಕುಳ ನಿಸರ್ಗಧಾಮಕ್ಕೆ ಚಿಕಿತ್ಸೆಗೆ ಕಳುಹಿಸಲಾಯಿತು. ಲ್ಯಾಂಡ್ಲಿಂಕ್ಸ್ ಬಳಿ ಕಾಡು ಇದ್ದು, ಅಲ್ಲಿಂದ ಕಡವೆ ನೀರಿಗಾಗಿ ಬಂದು ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದಿರಬೇಕು ಎಂದು ಅಗ್ನಿಶಾಮಕದಳ ಸಿಬ್ಬಂದಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement