ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಲ್ಪೆ: ಬೋಟ್ ಮಗುಚಿ ಮಗು ಸಮುದ್ರಪಾಲು

Lingaraj Badiger
Updated On : 20 May 2013, 11:37 am

ಮಲ್ಪೆ: ಇಲ್ಲಿನ ಸಮುದ್ರ ತೀರದಲ್ಲಿ ಬೋಟ್ ಮಗುಚಿ ಮಗು ಸಮುದ್ರ ಪಾಲಾದ ಘಟನೆ ಭಾನುವಾರ ನಡೆದಿದೆ. ದೊಡ್ಡಬಳ್ಳಾಪುರದ ನಿವಾಸಿ ಪ್ರಸನ್ನ ಎಂಬವರ ಮಗು ಹಿತೇಶ್ ಗೌಡ (2) ಸಮುದ್ರ ಪಾಲಾದ ಮಗು.
ಘಟನೆ ವಿವರ:  ಭಾನುವಾರ ಪ್ರಸನ್ನ ಅವರು ತಮ್ಮ 10 ಮಂದಿ ಸಂಬಂಧಿಕರೊಂದಿಗೆ ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಸಂಜೆ ಮಲ್ಪೆ ಸಮುದ್ರ ತೀರಕ್ಕೆ ವಿಹಾರಕ್ಕೆ ತೆರಳಿದ್ದರು. ಸಂಜೆ ಸುಮಾರು 6 ಗಂಟೆಗೆ ಬಾಡಿಗೆ ಸ್ಪೀಡ್ ಬೋಟ್ನಲ್ಲಿ ಹತ್ತು ಮಂದಿ ಸಮುದ್ರದಲ್ಲಿ 1 ಸುತ್ತು ಹೊಡೆದು, ಸ್ಥಳಕ್ಕೆ ಬಂದು ಇಳಿಯುವಾಗ ಈ ದುರಂತ ನಡೆದಿದೆ. ಭಾನುವಾರ ಸಮುದ್ರ ಎಂದಿಗಿಂತಲೂ ಉಗ್ರವಾಗಿತ್ತು. ಭಾರಿ ಅಲೆಯೊಂದು ಬೋಟಿಗೆ ಹೊಡೆದು ಬೋಟು ತಲೆಕೆಳಗಾಯಿತು. ಬೋಟ್ನಲ್ಲಿದ್ದ ಎಲ್ಲಾ 10 ಮಂದಿ ಸಮುದ್ರಕ್ಕೆ ಬಿದ್ದರು. ತಕ್ಷಣ ಬೋಟ್ನ ಚಾಲಕ ಮತ್ತು ಸ್ಥಳದಲ್ಲಿದ್ದ ತಮಿಳು ಮೀನುಗಾರರು ಧಾವಿಸಿ ಪ್ರಸನ್ನ ಮತ್ತಿತರರನ್ನು ಬದುಕಿಸಿದ್ದಾರೆ. ಆದರೆ, ತಾಯಿಯ ಕೈಯಲ್ಲಿದ್ದ ಮಗು ನೀರಿಗೆ ಬಿದ್ದಾಗ ಕೈ ತಪ್ಪಿದ್ದು, ಎಷ್ಟು ಹುಡುಕಾಡಿದರೂ ಸಿಗಲಿಲ್ಲ.  ಸ್ಥಳಕ್ಕೆ ಮಲ್ಪೆ ಪೊಲೀಸರು ಧಾವಿಸಿ ಪ್ರಕರಣ ದಾಖಲಿಸಿದ್ದಾರೆ.

ಯುವಕ ನಾಪತ್ತೆ
ಬೆಳ್ತಂಗಡಿ: ಪಡಂಗಡಿ ಗ್ರಾಮದ ಬದ್ಯಾರು ಮನೆಯ ಸಂತೋಷ್ (31) ಎಂಬವರು ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದಾರೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ಪತ್ನಿ ಬಾಲಿಕಾ ದೂರು ನೀಡಿದ್ದಾರೆ. ಇವರು ಮನೆಯಿಂದ ಸುಮಾರು ರು. 26 ಸಾವಿರ ನಗದಿನೊಂದಿಗೆ ಬೈಕಿನಲ್ಲಿ ಫೈನಾನ್ಸ್ನಲ್ಲಿ ಅಡವಿಟ್ಟ ಚಿನ್ನವನ್ನು ಬಿಡಿಸಲು ಹೊದವರು ಮರಳಿ ಮನೆಗೆ ಬಂದಿಲ್ಲ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement