ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೂಡುಬಿದಿರೆ: ಸಚಿವ ಪಟ್ಟಕ್ಕೆ ಲಗ್ಗೆಯಿಟ್ಟ 3ನೇ ರಾಜಕಾರಣಿ

Lingaraj Badiger
Updated On : 20 May 2013, 11:39 am

ಮೂಲ್ಕಿ: ಮೂಡುಬಿದಿರೆ ಕ್ಷೇತ್ರದಲ್ಲಿ ನಾಲ್ಕನೆ ಅವಧಿಗೆ ಶಾಸಕರಾಗಿ ಆಯ್ಕೆಯಾಗಿರುವ ಅಭಯಚಂದ್ರ ಜೈನ್ ಸಚಿವರಾಗುವ ಮೂಲಕ ಈ ಕ್ಷೇತ್ರದಿಂದ ಸಚಿವಪಟ್ಟಕ್ಕೆ ಲಗ್ಗೆಯಿಟ್ಟ ಮೂರನೇ ರಾಜಕಾರಣಿಯೆನ್ನಿಸಿಕೊಂಡಿದ್ದಾರೆ.
ಮೂಡುಬಿದಿರೆ  ಕ್ಷೇತ್ರದಲ್ಲಿ ದೇವರಾಜ್ ಅರಸು ಸಂಪುಟದಲ್ಲಿ ಕಾಂಗ್ರೆಸ್ ಪಕ್ಷದ ಡಾ. ದಾಮೋದರ ಮೂಲ್ಕಿ ಕೇವಲ ಎರಡು ತಿಂಗಳ ಅವಧಿಗೆ ಶಿಕ್ಷಣ ಸಚಿವರಾಗಿ ಕಾರ್ಯ ಸಲ್ಲಿಸಿದ್ದರು.  ಆ ಬಳಿಕ ಜನತಾ ಪಕ್ಷದ ಕೆ. ಅಮರನಾಥ ಶೆಟ್ಟಿ 1983,1985 ಹಾಗೂ 1994ರಲ್ಲಿ ಕಾರ್ಮಿಕ, ಧಾರ್ಮಿಕ ದತ್ತಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು ಕ್ಷೇತ್ರದ ಹೆಗ್ಗಳಿಕೆ.
ಇದೀಗ ನೇರ ನಡೆ ನುಡಿಯ ಅಭಯಚಂದ್ರ ಜೈನ್ ಸಚಿವರಾಗಿ ಆಯ್ಕೆಯಾಗಿದ್ದು ತನ್ನ ಅವಧಿಯಲ್ಲಿ ಮೂಡಬಿದಿರೆ ತಾಲೂಕು ರಚನೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement