ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಲ್ಲರಿಗೂ ಆರೋಗ್ಯ ವಿಮೆ: ಆರೋಗ್ಯ ಸಚಿವ ಖಾದರ್

Lingaraj Badiger
Updated On : 21 May 2013, 11:46 am

ಮಂಗಳೂರು: ಬಿಪಿಎಲ್, ಎಪಿಎಲ್ ಕಾರ್ಡ್ ಪರಿಗಣಿಸದೆ  ಎಲ್ಲ ನಾಗರಿಕರಿಗೂ 2 ಲಕ್ಷ ವರೆಗೆ  ಆರೋಗ್ಯ ವಿಮೆ ಯೋಜನೆ ತರಲು ಆರೋಗ್ಯ ಸಚಿವ ಯು.ಟಿ.ಖಾದರ್ ಸಿದ್ಧತೆ ನಡೆಸಿದ್ದಾರೆ.
ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಸಂಜೆ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತಮ್ಮ ಯೋಜನೆ ಬಗ್ಗೆ ವಿವರಿಸಿದರು. ಬಡತನ ರೇಖೆಗಿಂತ ಕೆಳಗಿನ ವರ್ಗದ ಜನರು ಆನಾರೋಗ್ಯಕ್ಕೀಡಾದ ಸಂದರ್ಭ ಆಸ್ಪತ್ರೆಗೆ ದಾಖಲಾದಾಗ ಸರ್ಕಾರದ ಅನೇಕ ಸೌಲಭ್ಯಗಳ, ವಿಮೆ ಪ್ರಯೋಜನ ಪಡೆಯುತ್ತಾರೆ. ಎಪಿಎಲ್ ಕಾರ್ಡ್ ಇದ್ದರೂ  ಬಡತನದಲ್ಲಿ ಅನೇಕ ಕುಟುಂಬಗಳಿವೆ. ಇಂಥ ಕುಟುಂಬದವರಿಗೂ ಸಹಿತ ಎಲ್ಲ ನಾಗರಿಕರಿಗೂ ವಿಮೆ ರಕ್ಷಣೆ ಸಿಗಲಿ ಎಂಬ ಉದ್ದೇಶದಿಂದ ವಿಮೆ ಯೋಜನೆ ಆರಂಭಿಸಬೇಕಿದೆ ಎಂದರು. ಅಂಗನವಾಡಿಯಲ್ಲಿರು ಮಕ್ಕಳಿಗೆ ಯಾವುದೇ ನಿರ್ದಿಷ್ಟ ವಿಮೆ ಯೋಜನೆ ಇಲ್ಲ ಹೀಗಾಗಿ ಅವರಿಗೂ ಆರೋಗ್ಯ ವಿಮೆ ಯೋಜನೆ ರೂಪಿಸಲಾಗುವುದು ಎಂದರು.
ವೆನ್ಲಾಕ್, ಲೇಡಿಗೋಷನ್ ಮಹಿಳಾ ಆಸ್ಪತ್ರೆಯಲ್ಲಿ ಜೆನರಿಕ್ ಔಷಧ ಮಳಿಗೆ ಆರಂಭಿಸುವ ಹಿಂದಿನ ಸರ್ಕಾರದ ಪ್ರಸ್ತಾಪಕ್ಕೆ ಬೆಂಬಲಿಸಿ ಮಾತನಾಡಿದರು. ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿಯದೆ  ನಿಷ್ಪಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಜಿಲ್ಲೆಯಲ್ಲಿ ಮಲೇರಿಯಾ ಸಹಿತ ಸೊಳ್ಳೆಯಿಂದ ಹರಡುವ ರೋಗಗಳ ವಿವರ ನೀಡಲು ಸೂಚಿಸಿದರು. ಈ ಬಗ್ಗೆ ಜಾಗೃತಿ ಕೆಲಸ ಮಾಡುವಂತೆ ಸೂಚಿಸಿದರು. ಪ್ರತಿ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳಿಗೆ ವ್ಯಾಪ್ತಿಯ ರೋಗ, ರುಜಿನಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು. ಜಾಗೃತಿ ಅಭಿಯಾನ ಕಟ್ಟುನಿಟ್ಟಾಗಿ ಮಾಡಬೇಕು ಎಂದು ಸೂಚಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸುವ ಮತ್ತು ಮೇಲ್ದರ್ಜೆಗೇರಿಸುವ ಬಗ್ಗೆ ಹಿಂದಿನ ಸರ್ಕಾರ ತಡೆ ಹಾಕಿರುವ ಬಗ್ಗೆ ಮಾಹಿತಿ ಪಡೆದ ಸಚಿವರು ಈ ನಿರ್ಣಯವನ್ನು ಪುನರ್ ಪರಿಶೀಲಿಸುವುದಾಗಿ ಹೇಳಿದರು.
ಚುನಾವಣೆ ಮುಗಿದ ಬಳಿಕವೂ ಅಧಿಕಾರಿಗಳು ತುರ್ತು ಸಮಸ್ಯೆಗಳಾದ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಂಡಿಲ್ಲ ಎಂದ ಸಚಿವರು,  ಚುನಾವಣೆ ಸಂದರ್ಭ ಸ್ಥಗಿತಗೊಂಡಿದ್ದ ಎಲ್ಲ ಕಾಮಗಾರಿಗಳನ್ನು ಆರಂಭಿಸುವಂತೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದರೆ ಜನ ತೊಂದರೆಗೊಳಗಾಗುತ್ತರೆ ಎಂದು ಎಚ್ಚರಿಸಿದರು. ಆರೋಗ್ಯಾಧಿಕಾರಿ ಒ.ಆರ್. ಶ್ರೀರಂಗಪ್ಪ ಮಾತನಾಡಿ, ನಮ್ಮ ಇಲಾಖೆಯಲ್ಲಿ 228 ಸಿಬ್ಬಂದಿ  ಇರುವಲ್ಲಿ, ಕೇವಲ 165 ಮಂದಿ ಇದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement