ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಐರಿ ಜನಾಂಗ ಕ್ರಿಕೆಟ್ ಕಪ್: ಬಲ್ಲಮಾವಟಿ ತಂಡಕ್ಕೆ ಪ್ರಶಸ್ತಿ

Lingaraj Badiger
Updated On : 21 May 2013, 11:53 am

ಮೂರ್ನಾಡು: ಕೊಡವ ಐರಿ ಜನಾಂಗದ ನಡುವೆ ನಡೆದ 2ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಐರೀರ ಬಲ್ಲಮಾವಟಿ ತಂಡ ದ್ವಿತೀಯ ಬಾರಿಗೆ ಟ್ರೋಫಿ ಹಾಗೂ ನಗದು ಬಹುಮಾನ ಮುಡಿಗೇರಿಸಿಕೊಂಡಿತು.
ಇಲ್ಲಿನ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ
ಬೇಂಗ್‌ನಾಡ್ ತಟ್ಟಂಡ ವಕ್ಕ ಮತ್ತು ವಿರಾಜಪೇಟೆ ಕೊಡಗು ಐರಿ ಸಮಾಜದ ಸಹಯೋಗದಲ್ಲಿ ಎರಡು ದಿನಗಳ ಕಾಲ ಏರ್ಪಸಲಾದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯದಲ್ಲಿ ಐರೀರ ಬಲ್ಲಮಾವಟ್ಟಿ ತಂಡ ಹಾಗೂ ಮುಲ್ಲೆರೀರ ಕೆದಮುಳ್ಳೂರು ತಂಡ ಫೈನಲ್ ಪಂದ್ಯಕ್ಕೆ ಪ್ರವೇಶಿಸಿದವು.
ಐರೀರ ಬಲ್ಲಮಾವಟ್ಟಿ ತಂಡ ಮುಲ್ಲೆರೀರ ಕೆದಮುಳ್ಳೂರು ತಂಡದ ವಿರುದ್ಧ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮುಲ್ಲೆರೀರ ಕೆದಮುಳ್ಳೂರು ತಂಡ ನಿಗದಿತ 8 ಓವರ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 43 ರನ್‌ಗಳ ಗುರಿ ನೀಡಿತು.
ನಂತರ ಬ್ಯಾಟಿಂಗ್ ಮಾಡಿದ ಐರೀರ ಬಲ್ಲಮಾವಟ್ಟಿ ತಂಡ 7.1 ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿ ಗೆಲವಿನ ನಗೆ ಬೀರಿತು.
ಸಮಾರೋಪ ಸಮಾರಂಭ: ಬೇಂಗ್ನಾಡ್ ತಟ್ಟಂಡ ವಕ್ಕದ ಅಧ್ಯಕ್ಷ ತಟ್ಟಂಡ ಸೋಮಯ್ಯ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಪೊನ್ನೀರ ಸರಸ್ವತಿ ಮಾತನಾಡಿ, ಜನಾಂಗದ ನಡುವೆ ಪ್ರೀತಿ, ವಿಶ್ವಾಸ, ಒಗ್ಗಟ್ಟು ಮೂಡಿಸುವಲ್ಲಿ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿ ಜನಾಂಗ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.
ಪ್ರತಿಭೆಗೆ ವೇದಿಕೆ: ವರ್ಷಪೂರ್ತಿ ಕೆಲಸಗಳ ಒತ್ತಡದಿಂದ ಬಳಲುತ್ತಿರುವವರಿಗೆ ವರ್ಷಕ್ಕೊಮ್ಮೆ ಇಂತಹ ಕ್ರೀಡಾಕೂಟಗಳು ಅವಶ್ಯಕ. ಅನೇಕ ಕ್ರೀಡಾ ಪ್ರತಿಭೆಗಳಿದ್ದು ಜನಾಂಗದ ನಡುವೆ ಕ್ರೀಡೆ ನಡೆಸುವುದರಿಂದ ಎಲ್ಲರಿಗೂ ಅವಕಾಶಗಳು ದೊರಕಿ ಕ್ರೀಡಾ ಪ್ರತಿಭೆ ಪ್ರದರ್ಶಿಸಲು ಸೂಕ್ತ ವೇದಿಕೆಯಾಗುತ್ತದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಮೂರ್ನಾಡಿನಲ್ಲಿ ಮಾಜಿ ಸೈನಿಕ ಅಪ್ಪಚಂಡ ಕೃಷ್ಣಪ್ಪ ಮಾತನಾಡಿದರು.
ಮರಗೋಡು ಕಾಫಿ ಬೆಳೆಗಾರ ಐಮಂಡ ಪೊನ್ನಪ್ಪ, ಅಮ್ಮಣಂಡ ಮತ್ತು ಐರೀರ ವಕ್ಕ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ನ ಅಧ್ಯಕ್ಷ ಐರೀರ ಜಾಬು ಪೂಣಚ್ಚ, ಕುಟ್ಟಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುಡಿಯಂಡ ಶಾಂತಿ ಸೋಮಯ್ಯ ಮುಖ್ಯ ಅತಿಥಿಯಾಗಿದ್ದರು.
ಕೊಡವ ಐರಿ ಸಮಾಜದ ಅಧ್ಯಕ್ಷ ತಟ್ಟಂಡ ಪೂಣಚ್ಚ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಮೇಲತಂಡ ರಮೇಶ್ ಮತ್ತಿತರರು ಇದ್ದರು. ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಲಾಯಿತು.
ವೈಯಕ್ತಿಕ ಪ್ರಶಸ್ತಿ: ಫೈನಲ್ ಪಂದ್ಯದ ಉತ್ತಮ ದಾಂಡಿಗ ಪ್ರಶಸ್ತ್ತಿಯನ್ನು ಐರೀರ ತಂಡದ ಚಂಗಪ್ಪ, ಉತ್ತಮ ಬೌಲರ್ ಪ್ರಶಸ್ತಿಯನ್ನು ಐರೀರ ತಂಡದ ರಾಬಿನ್, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಐರೀರ ತಂಡದ ಚಂಗಪ್ಪ, ಬೆಸ್ಟ್ ಕ್ಯಾಚ್ ಐರೀರ ತಂಡದ ಸೂರಜ್ ಪಡೆದುಕೊಂಡರು.
ಕೊಡವ ಐರಿ ಸಮಾಜದ ಖಜಾಂಚಿ ಕುಮಾರ್ ದೇವಯ್ಯ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement