ಸಚಿವ ಸೊರಕೆಗೆ ಅದ್ಧೂರಿ ಸ್ವಾಗತ
ಪಡುಬಿದ್ರಿ: ಸಚಿವರಾಗಿ ಸ್ವಕ್ಷೇತ್ರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರನ್ನು ಉಡುಪಿ ಜಿಲ್ಲಾ ಗಡಿಭಾಗ ಹೆಜಮಾಡಿಯಲ್ಲಿ ಜಿಲ್ಲಾಡಳಿತ, ಕಾಂಗ್ರೆಸ್ ಹಾಗೂ ಸಾರ್ವಜನಿಕರ ಪರವಾಗಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಜಿಲ್ಲಾಧಿಕಾರಿ ಡಾ. ಎಂ.ಟಿ.ರೇಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ ಅವರು ಸಚಿವ ಸೊರಕೆ ಅವರಿಗೆ ಹಾರಾರ್ಪಣೆ ಮೂಲಕ ಜಿಲ್ಲಾಡಳಿತದ ಪರವಾಗಿ ಸ್ವಾಗತ ನೀಡಿದರು.
ಜಿಲ್ಲಾ ವಾರ್ತಾಧಿಕಾರಿ ಎಂ. ಜುಂಜಣ್ಣ, ಡಿವೈಎಸ್ಪಿ ಕೆ. ಜಿ. ದೇವರಾಜು, ರಾಜಗೋಪಾಲ್, ಜಗದೀಶ್ ಮುಂತಾದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ನಂತರ ಪೇಟ, ಹೂವಿನ ಹಾರಗಳೊಂದಿಗೆ ಕಾಪು ಕಾಂಗ್ರೆಸ್ ಪ್ರಮುಖರಾದ ನವೀನ್ಚಂದ್ರ ಜೆ. ಶೆಟ್ಟಿ ಸ್ವಾಗತ ನೀಡಿದರು.
ಕಾಂಗ್ರೆಸ್ ಪ್ರಮುಖರಾದ ಎಂ.ಪಿ.ಮೊಹಿದಿನಬ್ಬ, ಶ್ರೀಕರ ಸುವರ್ಣ, ಸುಧಿರ್ ಕುಮಾರ್, ಯಶವಂತ್ ಪೂಜಾರಿ ಪಲಿಮಾರು ಮತ್ತಿತರ ಕಾಂಗ್ರೆಸ್ ಮುಖಂಡರು ಇದ್ದರು.
ಕಟಪಾಡಿ ವರದಿ: ಕಾಪು ಕ್ಷೇತ್ರದ ಶಾಸಕ, ನೂತನ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಪ್ರಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ವಿನಯಕುಮಾರ್ ಸೊರಕೆಗೆ ಕಟಪಾಡಿಯಲ್ಲಿ ಅದ್ಧೂರಿಯ ಸ್ವಾಗತ ಕೋರಲಾಯಿತು.
ಕಾಪು ಬ್ಲಾಕ್ ಮಾಜಿ ಅಧ್ಯಕ್ಷ ಶ್ರೀಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ಶ್ರೀಕರ ಅಂಚನ್, ಕಟಪಾಡಿ ಕಾಂಗ್ರೆಸ್ ಸ್ಥಾನೀಯ ಅಧ್ಯಕ್ಷ ಅಶೋಕ್ ರಾವ್, ಕಾರ್ಯದರ್ಶಿ ಮಹಮ್ಮದ್ ಫಯಾಜ್, ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಗುಣಾ ಪೂಜಾರ್ತಿ, ಮಾಜಿ ಉಪಾಧ್ಯಕ್ಷೆ ಪ್ರಭಾ ಶೆಟ್ಟಿ, ಮಾಜಿ ಸದಸ್ಯೆ ಆಶಾ ಕಟಪಾಡಿ, ನಹೀಮ್ ಸಾಹೇಬ್, ವಿಜಯ ಮಾಬಿಯನ್, ಸತೀಶ್ ಸುವರ್ಣ ಇದ್ದರು.
ಕಾಪು-ಅಭಿನಂದನೆ ಸ್ವೀಕಾರ: ಕಾಪು ರಾಜೀನ ಭವನಕ್ಕೆ ಭೇಟಿ ನೀಡಿದ ಸಚಿವರು ಅಲ್ಲಿ ಕಾರ್ಯಕ್ರಮರಿಂದ ಅಭಿನಂದನೆ ಸ್ವೀಕರಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಆಗಮಿಸಿದರು. ಅಲ್ಲಿ ನೂರಾರು ಮಂದಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸಚಿವರನ್ನು ಹೂಹಾರಗಳೊಂದಿಗೆ ಅದ್ದೂರಿಯಾಗಿ ಬರ ಮಾಡಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಂತರ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ, ಮತದಾರರಿಗೆ ಕೃತಜ್ಞತೆ ಅರ್ಪಿಸಿದ ಅವರು ಸಚಿವನಾಗಿ ಕಾರ್ಯನಿರ್ವಹಿಸುವುದಕ್ಕೆ ಸಹಕಾರ ಕೋರಿದರು. ಶಾಸಕರಾದ ಪ್ರಮೋದ್ ಮಧ್ವರಾಜ್, ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನರಸಿಂಹಮೂರ್ತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ ಮುಂತಾದವರು ಇದ್ದರು.
ಅಲ್ಲಿಂದ ಸಚಿವರು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಸಂಕೀರ್ಣಕ್ಕೆ ತೆರಳಿ, ಅಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿ ಅಭಿನಂದನೆ ಸ್ವೀಕರಿಸಿದರು. ನಂತರ ಕೃಷ್ಣ ಮಠಕ್ಕೆ, ಶೋಕಮಾತಾ ಇಗರ್ಜಿಗೆ ತೆರಳಿ ನೀಡಿ ಧರ್ಮಗುರುಗಳನ್ನು ಭೇಟಿಯಾದರು.