ಅಪಘಾತ: ಮೂವರ ದುರ್ಮರಣ
ಪಡುಬಿದ್ರಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಬೀಡು ಎಂಬಲ್ಲಿ ಕಾರು ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಜೂರು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಹಾಗೂ ಆಕೆಯ ಪತಿ ಸೇರಿದಂತೆ ಮೂವರು ಮೃತಪಟ್ಟ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಮಜೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅರುಣಾ ರೈ(55), ಆಕೆಯ ಪತಿ ಸತೀಶ್ ರೈ(58) ಮತ್ತು ಪತಿಯ ಸಹೋದ್ಯೋಗಿ, ಕಾರು ಚಲಾಯಿಸುತ್ತಿದ್ದ ಸತೀಶ್ ಕುಮಾರ್ (43) ಮೃತರು. ಪಡುಬಿದ್ರಿ ಠಾಣಾಧಿಕಾರಿ ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.