ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗುಡುಗು ಸಹಿತ ಮಳೆ: ಸಿಡಿಲಿಗೆ ವ್ಯಕ್ತಿ ಬಲಿ

Rashmi Kasaragodu
Updated On : 22 May 2013, 11:59 am

ಉಡುಪಿ: ಈ ಬಾರಿಯ ಮಳೆಗಾಲ ಸೋಮವಾರ ರಾತ್ರಿ, ಮಂಗಳವಾರ ಮುಂಜಾನೆ ಭರ್ಜರಿಯಾಗಿಯೇ ಆರಂಭವಾಗಿದ್ದು, ಒಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿದೆ.
 ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಮಾನೆಗುಡ್ಡೆ ಎಂಬಲ್ಲಿನ ನಿವಾಸಿ ರಾಜು ಯಾನೆ ಚಿಂಗ (50) ಸೋಮವಾರ ರಾತ್ರಿ 11.30ಕ್ಕೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಅವರು ಮನೆಯೊಳಗೆ ಮಲಗಿದ್ದಾಗ ಸಿಡಿಲು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ವಾಹನದಲ್ಲಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ರಾತ್ರಿ ಮಳೆ: ಸೋಮವಾರ ರಾತ್ರಿಯವರೆಗೂ ಆಕಾಶದಲ್ಲಿ ಮೋಡ ಅಥವಾ ಮಳೆಯ ವಾತಾವರಣ ಇರಲಿಲ್ಲ, ರಾತ್ರಿ 10 ಗಂಟೆಯ ನಂತರ ನಿಧಾನಾಗಿ ಮಿಂಚು ಗುಡುಗು ಆರಂಭವಾಯಿತು. 12 ಗಂಟೆಯ ನಂತರ ಸುಮಾರು 3 ಗಂಟೆಗಳ ಕಾಲ ಭಾರಿ ಗಾಳಿ, ಸಿಡಿಲಿನೊಂದಿಗೆ ಮಳೆ ಬಂದಿದೆ.
ಆಸ್ತಿ, ಸೊತ್ತು ಹಾನಿ: ಮಳೆಗೆ ಉಡುಪಿ ಸಮೀಪದ ಪಾದಬೆಟ್ಟು ಗ್ರಾಮದಲ್ಲಿ ಲಕ್ಷ್ಮಣ ಆಚಾರ್ಯ ಎಂಬವರ ಮನೆಯ ಗೋಡೆಗಳು ಬಿದ್ದು ಸುಮಾರು ರು. 50 ಸಾವಿರ ನಷ್ಟ ಸಂಭವಿಸಿದೆ. ಶಿವಳ್ಳಿ ಗ್ರಾಮದ ಇಸ್ಮಾಯಿಲ್ ಅವರ ವಾಸ್ತವ್ಯದ ಮನೆ ಮೇಲೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದ್ದು ರು. 50 ಸಾವಿರ ನಷ್ಟ ಸಂಭವಿಸಿದೆ.
ಕಾರ್ಕಳದ ಎರ್ಲಪಾಡಿ ಗ್ರಾಮದ ಮಂಜುನಾಥ್ ಎಂಬವರಿಗೆ ಸೇರಿದ ದನದ ಕೊಟ್ಟಿಗೆಗೆ ಸಿಡಿಲು ಬಡಿದ ಪರಿಣಾದ ಗಬ್ಬದ ದನ ಮೃತಪಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement