ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಭ್ರಷ್ಟಾಚಾರ ಮುಕ್ತ ಇಲಾಖೆ ಮಾಡುವೆ: ಅರಣ್ಯ ಸಚಿವ ರೈ

Rashmi Kasaragodu
Updated On : 22 May 2013, 11:58 am

ಮಂಗಳೂರು:  ಅರಣ್ಯ ಮತ್ತು ಪರಿಸರ ಜೀವಿಸಾಸ್ತ್ರ ಇಲಾಖೆಯನ್ನು ಜನಸ್ನೇಹಿ, ಪರಿಸರ ಸ್ನೇಹಿ ಮತ್ತು ಭ್ರಷ್ಟಾಚಾರ ಮುಕ್ತ ಇಲಾಖೆ ಮಾಡುವ ಉದ್ದೇಶ ಇದೆ ಎಂದು ಅ ಸಚಿವ ಬಿ.ರಮಾನಾಥ ರೈ ಹೇಳಿದರು.
 ಸರ್ಕ್ಯೂಟ್ ಹೌಸ್‌ನಲ್ಲಿ ಅಧಿಕಾರಿಗಳ ಜತೆ ಪರಿಚಯ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಪೊಲೀಸ್ ಠಾಣಾಧಿಕಾರಿ ಸರಿ ಇದ್ದರೆ, ಠಾಣೆ ಸಿಬ್ಬಂದಿ ಎಲ್ಲ ಸರಿಯಾಗಿರುತ್ತಾರೆ. ಅದರಂತೆ ನಾನು ಸರಿ ಇದ್ದರೆ ಇಲಾಖೆಯನ್ನು ಶುದ್ಧೀಕರಿಸಬಹುದು. ಆಗ ಇಲಾಖೆ ಅಧಿಕಾರಿಗಳೆಲ್ಲ ಸರಿ ಇರುತ್ತಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಬಯಸುತ್ತೇನೆ ಎಂದರು.
 ಅರಣ್ಯ ಇಲಾಖೆ ಎಂದಾಕ್ಷಣ ಜನರು ಇದರಿಂದ ನಮಗೇನು ಲಾಭ ಇದೆ ಎಂದು ಕೇಳುತ್ತಾರೆ. ಆದರೆ ಅರಣ್ಯ ರಕ್ಷಣೆಯಿಂದ, ಪರಿಸರ ಉಳಿಸುವುದರಿಂದ ಮಾನವ ಕುಲಕ್ಕೆ ಲಾಭ ಇದೆ. ಪರಿಸರ ಉಳಿಸಲು, ಕಾಡು ಬೆಳೆಸಲು ಲಕ್ಷ, ವೃಕ್ಷ ಅಭಿಯಾನ ಮೂಲಕ ಸಸಿ ನೆಡುವ ಕಾರ್ಯಕ್ರಮ ನಡೆಸುಯ ಯೋಚನೆ ಇದೆ ಎಂದರು.
 ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿಸಲು ಕ್ರಮ ಕೈಗೊಳ್ಳಲಾಗುವುದು. ಆದರೆ ನೇತ್ರಾವತಿ ನದಿ ತಿರುವು ಯೋಜನೆಗೆ ಜನರ ವಿರೋಧ ಇದೆ. ಸ್ಥಳೀಯರಿಗೆ ನೀರಿನ ಕೊರತೆಯಾಗುತ್ತದೆ. ಹೀಗಾಗಿ ಯೋಜನೆ ಕಾರ್ಯಗತಗೊಳಿಸಲು ಅವಕಾಶ ನೀಡುವುದಿಲ್ಲ.
 ಕುಡಿಯುವ ನೀರು, ನಿವೇಶನ ಹಂಚಿಕೆ, ಕೃಷಿ, ಭೂಸ್ವಾಧೀನ ಸೇರಿದಂತೆ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿವೆ. ಇದಕ್ಕೆ ಜಿಲ್ಲೆ ಅಲ್ಲ ಸಚಿವರು ಚರ್ಚಿಸಿ ಪರಿಹಾರ ಹುಡುಕಲಾಗುವುದು. ಸಿಆರ್‌ಝಡ್ ಸಮಸ್ಯೆ ಸಹಿತ ಅರಣ್ಯ ಮತ್ತು ಪರಿಸರ ಇಲಾಖೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೇರ ಹತೋಟಿಯಲ್ಲಿರುವುದರಿಂದ ಎರಡೂ ಸರ್ಕಾರ ಜತೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು. ಆದಿವಾಸಿಗಳು ಮೂರು ತಲೆಮಾರುಗಳಿಂದ ವಾಸ್ತವ್ಯ ಇದ್ದರೆ ಅಂಥವರನ್ನು ವಾಸಿಸಲು ಅನುವು ಮಾಡಿಕೊಂಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕ ಮೊಯ್ದಿನ್ ಬಾವ, ಮಾಜಿ ಮೇಯರ್ ಶಶಿಧರ ಹೆಗ್ಡೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement