ಲಕ್ಷ್ಮೀನಾರಾಯಣಗೆ ಯುವ ಪ್ರಶಸ್ತಿ
ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಕನಕಮಜಲು ಯುವಕ ಮಂಡಲದ ಸಕ್ರಿಯ ಸದಸ್ಯ ಹಾಗೂ ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅವರಿಗೆ 2011-12ನೇ ಸಾಲಿನ ಕೇಂದ್ರ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ಕೊಡಮಾಡುವ ರಾಷ್ಟ್ರೀಯ ಯುವ ಪ್ರಶಸ್ತಿ ಘೋಷಣೆಯಾಗಿದೆ. ಯುವಕ ಮಂಡಲ ಹಾಗೂ ಚಲನಚಿತ್ರ ಅಕಾಡೆಮಿ ಪ್ರಾಯೋಜಿತ 'ಬೆಳ್ಳಿ ಮಂಡಲ'ಗಳ ಮೂಲಕ ಲಕ್ಷ್ಮೀನಾರಾಯಣರು ಕಳೆದ 15 ವರ್ಷಗಳಿಂದ ಯುವಜನ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದಾರೆ. ಇವರ ಕಳೆದ ಮೂರು ವರ್ಷಗಳ ವೈಯಕ್ತಿಕ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದ.ಕ. ಜಿಲ್ಲೆಯ ನೆಹರು ಯುವ ಕೇಂದ್ರದ ಸಲಹಾ ಸಮಿತಿ ಸದಸ್ಯರೂ ಅದ ಲಕ್ಷ್ಮೀನಾರಾಯಣರಿಗೆ ಶೀಘ್ರವೇ ನಡೆಯುವ ಸಮಾರಂಭದಲ್ಲಿ ಬೆಳ್ಳಿಪದಕ, ಪ್ರಮಾಣಪತ್ರ ಹಾಗೂ ರು. 40 ಸಾವಿರ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು