ಹನಿ ನೀರಾವರಿಗೆ ವಿಶೇಷ ತಂತ್ರಜ್ಞಾನ
ಮಂಗಳೂರು: ಗಾಳಿಯ ಸಹಾಯದಿಂದ ಅಂರ್ತಜಲ ನೀರನ್ನು ಭೂಮಿಯ ಮೇಲಿರುವ ಟ್ಯಾಂಕಿಗೆ ಪೈಪ್ಲೈನ್ಗಳ ಮೂಲಕ ಶೇಖರಿಸಿಡುವ ತಂತ್ರಜ್ಞಾನವನ್ನು ಶ್ರೀ ದೇವಿ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ಸಂಶೋಧಿಸಿದ್ದಾರೆ.
ಶೇಖರಿಸಿದ ನೀರನ್ನು ಹನಿ ನೀರಾವರಿಗೆ ಬಳಸಬಹುದು. ನೀರಿನ ಉಳಿತಾಯಕ್ಕಾಗಿ ಹನಿ ನೀರಾವರಿಯನ್ನು ಉಪಯುಕ್ತವೆಂದು ನಿರ್ಣಯಿಸಲಾಗಿದೆ. ಇಲ್ಲಿ ಯಾವುದೇ ಇಂಧನ, ವಿದ್ಯುಚ್ಛಕ್ತಿ ಬಳಸುವ ಅವಶ್ಯಕತೆ ಇಲ್ಲ. ಹನಿ ನೀರಾವರಿ ಬಳಸುವುದರಿಂದ ಶೇ. 50ರಷ್ಟು ನೀರನ್ನು ಪೋಲಾಗದಂತೆ ತಡೆಯಬಹುದು ಎಂಬುವುದು ವಿದ್ಯಾರ್ಥಿಗಳಾದ ದೀಕ್ಷಿತ್ ಬಂಜನ್, ಗಿರೀಶ್ ಎಚ್, ಲೋಯನ್ ಫ್ರಾಂಕ್ ಡಿಸೋಜ, ಸಚಿನ್ ಎಂ ವಿಶ್ಲೇಷಿಸಿದರು. ಸಲಹೆಗಾರರಾಗಿ ಪ್ರಾಂಶುಪಾಲ ಡಾ. ದಿಲೀಪ್ ಕುಮಾರ್, ಕೆ. ಸುರೇಶ್ ಮಂಜೆ, ವಿಶ್ಲೇಷಣೆ ಸಲಹೆಗಾರ ಜಿ.ಒ. ಹರ್ಷ ಸಹಕಾರ ನೀಡಿದ್ದಾರೆ.