ದೇವಳದ ಹುದ್ದೆಗೆ ತಡೆಯಾಜ್ಞೆ
ಮಂಗಳೂರು: ಸುರತ್ಕಲ್- ಕಾಟಿಪಳ್ಳದ ಗಣೇಶಪುರದ ಶ್ರೀ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಮಂಡಳಿಯಲ್ಲಿ ಕರ್ನಾಟಕ ಧಾರ್ಮಿಕ ಪರಿಷತ್ತಿನ ಆದೇಶದಂತೆ ನೇಮಕಗೊಂಡ 9 ಮಂದಿಯಲ್ಲಿ ಪ್ರಧಾನ ಅರ್ಚಕರನ್ನು ಹೊರತುಪಡಿಸಿ ಉಳಿದ 8 ಮಂದಿಯ ಹುದ್ದೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸುಪ್ರೀಂ ಕೋರ್ಟಿನ ನಿಯಮಕ್ಕೆ ವಿರುದ್ಧವಾದ ವ್ಯವಸ್ಥಾಪನಾ ಸಮಿತಿಯ ನೇಮಕಾತಿಗೆ ದೇವಳದ ಪ್ರದಾನ ಅರ್ಚಕರಾದ ಶ್ರೀನಿವಾಸ ಪಟೇಲ ಅವರು ರಿಟ್ ಅರ್ಜಿ ಸಲ್ಲಿಸಿದ್ದರು.