ನಿಶ್ಚಿತಾರ್ಥವಾಗಿದ್ದ ಯುವತಿ ಆತ್ಮಹತ್ಯೆ
ಕಾರ್ಕಳ: ತಾಲೂಕಿನ ನಿಂಜೂರು ಗ್ರಾಮದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ವಿಶಾಲಾಕ್ಷ್ಮೀ(24) ಮೃತರು. ಇವರು ಮನೆ ಪಕ್ಕಾಸಿಗೆ ಚೂಡಿದಾರ ಶಾಲಿನಿಂದ ಕುತ್ತಿಗೆ ನೇಣು ಬಿಗಿದು ಆತ್ಮಹತ್ಮೆ ಮಾಡಿಕೊಂಡಿದ್ದಾರೆ. ಈಕೆಗೆ ಸೆಪ್ಟೆಂಬರ್ ತಿಂಗಳಲ್ಲಿ ಮದುವೆ ಗೊತ್ತಾಗಿದ್ದು, ಇದೇ ಕಾರಣದಿಂದ ಮನನೊಂದು ಕೃತ್ಯ ಎಸೆಗಿರಬಹುದೆಂದು ಶಂಕಿಸಲಾಗಿದೆ.
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಕೋಟ: ಇಲ್ಲಿನ ಇಳ್ತೂರು ಗ್ರಾಮದಲ್ಲಿ ಮದ್ಯಪಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರು ಸುರೇಂದ್ರ (41), ಅವರು ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದು, ವಿಪರೀತ ಮದ್ಯವಸನಿಯಾಗಿದ್ದರು. ಆದರೆ, ಮದ್ಯ ಸೇವಿಸಲು ಹಣವಿಲ್ಲದೆ ಮೇ 19ರಂದು ರಾತ್ರಿ ಮನೆಯಲ್ಲಿ ಯಾವುದೋ ವಿಷ ಸೇವಿಸಿ ನರಳುತ್ತಿದ್ದವರನ್ನು, ಮನೆಯವರು ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ಗುರುವಾರ ಮುಂಜಾನೆ 2.30 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಅವರ ಸಂಬಂಧಿ ಪ್ರಶಾಂತ್ ಶೆಟ್ಟಿ ಅವರು ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್ಸಾರ್ಟಿಸಿ ಬಳಿ ಅಪರಿಚತ ಶವ
ಮಂಗಳೂರು: ಬಿಜೈ ಕೆಎಸ್ಆರ್ಟಿಸಿ ಬಸ್ ತಂಗುದಾಣ ಬಳಿ ಅಪರಿಚಿತ ಶವ ಪತ್ತೆಯಾಗಿದೆ. 45 ವರ್ಷ ಪ್ರಾಯ, ಕೆಂಪು ಟೀಶರ್ಟ್, ಚೌಕುಳಿ ಲುಂಗಿ ಧರಿಸಿದ್ದು, ವೆನ್ಲಾಕ್ ಆಸ್ಪತ್ರೆ ವೈದ್ಯರ ಚೀಟಿ ಪತ್ತೆಯಾಗಿದೆ. ವಾರೀಸುದಾರರು ಉರ್ವ ಪೊಲೀಸ್ ಠಾಣೆ 2220521 ಸಂಪರ್ಕಿಸಬಹುದು.
ಬೀಚ್ನಲ್ಲಿ ಅಪರಿಚಿತ ಶವ
ಮಂಗಳೂರು: ಉಳ್ಳಾಲ ಉಚ್ಚಿಲ ಕಡಲ ತೀರ ಮಾಸ್ಕೊ ಬಳಿ ಮೃತದೇಹ ಪತ್ತೆಯಾಗಿದೆ. 55 ವರ್ಷದ ಗಂಡಸು, ಉರುಟು ಮುಖ, ಕಪ್ಪು ಬಣ್ಣ, ಬಿಳಿ ಗಡ್ಡ, ಮೈಮೇಲೆ ಬಟ್ಟೆ ಇರಲಿಲ್ಲ, ಕಪ್ಪು ನೂಲಿನ ಉಡಿದಾರವಿದೆ. ತಮಿಳುನಾಡಿನ ಮೀನುಗಾರ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಾರೀಸುದಾರರು ಉಳ್ಳಾಲ ಠಾಣೆ 0824-2466269 ಸಂಪರ್ಕಿಸಬಹುದು.