ಪುತ್ತೂರು: ವಿವಿಧ ಕಾಮಗಾರಿಗೆ ರು. 15ಲಕ್ಷ ಬಿಡುಗಡೆ
ಮಂಗಳೂರು: ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರ 2012-13ನೇ ಸಾಲಿನಲ್ಲಿ ಪುತ್ತೂರಿನ ವಿವಿಧ 12 ಕಾಮಗಾರಿಗಳಿಗೆ ಪ್ರಥಮ ಕಂತಿನಲ್ಲಿ ರು. 21 ಲಕ್ಷ ಮಂಜೂರಾಗಿದ್ದು, ರು. 15 ಲಕ್ಷ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಹೇಳಿದ್ದಾರೆ.
ಪುತ್ತೂರಿನ ಚಾರ್ವಕ ಗ್ರಾಮದ ಅತಾಜೆ-ಎರ್ಬೋಳು ರಸ್ತೆ ಅಭಿವೃದ್ಧಿಗೆ ರು. 75 ಸಾವಿರ, ಪಾಲ್ತಾಡಿ ಗ್ರಾಮದ ಉಪ್ಪಳಿಗೆ ಮೂಡತ್ತಾರು ರಸ್ತೆಯಲ್ಲಿ ಮೋರಿ ರಚನೆಗೆ ರು. 75 ಸಾವಿರ, ನೂಜಿಬಾಳ್ತಿಲ ಗ್ರಾಮದ ನಡವಳಿಕೆ ರಸ್ತೆ ಅಭಿವೃದ್ಧಿಗೆ ರು. 75ಸಾವಿರ ಬಿಡುಗಡೆ ಮಾಡಲಾಗಿದೆ. ಕಸಬಾ ಗ್ರಾಮದ ಮಂಜಲ್ಪಡ್ಪು ಸರ್ಕಾರಿ ಪ್ರಾಥಮಿಕ ಶಾಲೆಯ ರಂಗಮಂದಿರ ರಚನೆಗೆ ರು. 2.25 ಲಕ್ಷ, ಹಿರೇಬಂಡಾಡಿ ಗ್ರಾಮದ ಪಿಲಿಪಂಜರ ಮುಡಿಪು ರಸ್ತೆ ಕಾಮಗಾರಿಗೆ ರು. 4.50 ಲಕ್ಷ, ಅಲಂಕಾರು ಗ್ರಾಮದ ಅಲಂಕಾರು ಕಕ್ವೆ ರಸ್ತೆ ಅಭಿವೃದ್ಧಿಗೆ ರು. 75ಸಾವಿರ, ಕುಂತೂರು ಗ್ರಾಮದ ಬಾಚಡ್ಕ ರಸ್ತೆ ಅಭಿವೃದ್ಧಿಗೆ ರು. 75ಸಾವಿರ, ರಾಮಕುಂಜ ವರ್ಲಡ್ಕದಿಂದ ಕುಂಡಡ್ಕ ಅಂಗನವಾಡಿ ರಸ್ತೆ ಕಾಮಗಾರಿಗೆ ರು. 75ಸಾವಿರ, ನೆಲ್ಯಾಡಿ ಗ್ರಾಮದ ಮಾದೇರಿ ಪುಚ್ಚೇರಿ ಇಚ್ಚೂರು ರಸ್ತೆ ಅಭಿವೃದ್ಧಿಗೆ ರು. 2.25 ಲಕ್ಷ, ಶಿರಾಡಿ ಗ್ರಾಮದ ಉಗ್ರಾಣಿಗುತ್ತು ಮುಕ್ಕಡಪ್ಪು ಪದಂಬಳ ರಸ್ತೆ ಮೋರಿ ರಚನೆಗೆ ರು. 75ಸಾವಿರ, ಕಡಬ ಗ್ರಾಮದ ಅಡ್ಡಗದ್ದೆ ಕುದ್ದಕೋಳಿ ಕೋನೆಜಾಲು ರಸ್ತೆ ಕಾಮಗಾರಿಗೆ ರು. 75ಸಾವಿರ, ಕಾಣಿಯೂರು-ಮುಗೇರಂಜ ರಸ್ತೆ ಅಭಿವೃದ್ಧಿಗೆ ರು. 75ಸಾವಿರ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.