ಶ್ರೀದೇವಿ ಕಾಲೇಜಿಗೆ 9ನೇ ರ್ಯಾಂಕ್
ಮಂಗಳೂರು: ಬೆಂಗಳೂರು ರಾಜೀವಿ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆದ ಬಿ.ಫಾರ್ಮ್ ಪರೀಕ್ಷೆಯಲ್ಲಿ ಶ್ರೀದೇವಿ ಕಾಲೇಜಿನ ಭಟ್ ಲಕ್ಷ್ಮಿತ್ ಕೌಶಿಕ್ ಬಾಯಿ ಶೇ. 82.83 ಅಂಕ ಗಳಿಸಿ 9ನೇ ರ್ಯಾಂಕ್ ಪಡೆದಿದ್ದಾರೆ.
ಅಡ್ವಾನ್ಸ್ ಇಂಡಸ್ಟ್ರಿಯಲ್ ಫಾರ್ಮಸಿಯಲ್ಲಿ ಕಬ್ರವಾಲ್ ಹರ್ಷ ಭರತ್ಕುಮಾರ್ 6ನೇ ರ್ಯಾಂಕ್, ಚೌಧರಿ ಕಿಂಜಲ್ ಲಕ್ಷ್ಮಿಬಾಯಿ 10ನೇ ರ್ಯಾಂಕ್, ಜೋಶಿ ವಿರಾಜ್ ಕುಮಾರ್ 10ನೇ ರ್ಯಾಂಕ್ ಪಡೆದಿದ್ದಾರೆ. ಟೆಕ್ನಾಲಜಿ ಬಯೋಫಾರ್ವುಸಿಯಲ್ಲಿ ಪಟೇಲ್ ರಿಸ್ವಾ ಸುರೇಶ್ ಕುಮಾರ್ 9ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.