ಕುಂಭಾಶಿ: ಕಣ್ಣಿನ ಪೊರೆ ಉಚಿತ ತಪಾಸಣೆ ಶಿಬಿರ
ಕುಂದಾಪುರ: ಸಮಾಜ ಸೇವೆಯ ಮೂಲಕ ಬಡಜನರ ನೋವುಗಳಿಗೆ ಸ್ಪಂದಿಸುವಂತಹ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆಗಳು ನೀಡುತ್ತಿವೆ. ಸಾರ್ವಜನಿಕರೂ ಅದರ ಸದೋಪಯೋಗವನ್ನು ಪಡೆದುಕೊಳ್ಳಬೇಕು. ಪಂಚಯೇಂದ್ರಿಯಗಳಲ್ಲಿ ಅತಿ ಸೂಕ್ಷ್ಮವಾದ ಅಂಗ ಕಣ್ಣು. ರಕ್ಷಣೆಯ ಜತೆಗೆ ಕಣ್ಣಿನ ದಾನದ ಅರಿವನ್ನು ಪಡೆದುಕೊಂಡು ಮತ್ತೂಂದು ಜೀವಕ್ಕೆ ಪುನರ್ಜನ್ಮ ನೀಡುವ ಭಾಗ್ಯವನ್ನು ಕರುಣಿಸುವ ಕಣ್ಣುಗಳು ನಮ್ಮದಾಗಬೇಕು ಎಂದು ಉಡುಪಿ ಕಣ್ಣಿನ ತಜ್ಞ ನಿತ್ಯಾನಂದ ನಾಯಕ್ ಹೇಳಿದರು.
ಅವರು ಗುರುವಾರ ಕೋಟೇಶ್ವರ ರೋಟರಿ ಕ್ಲಬ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಮತ್ತು ಅಂಧತ್ವ ನಿವಾರಣಾ ವಿಭಾಗ ಉಡುಪಿ ಮತ್ತು ಕುಂಭಾಶಿ ಗ್ರಾಮ ಪಂಚಾಯತ್ ಇವರ ಜಂಟಿ ಆಶ್ರಯದೊಂದಿಗೆ ವಿನಾಯಕ ಸಭಾ ಭವನದಲ್ಲಿ ಜರುಗಿದ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಆಚಾರ್ ಶಿಬಿರ ಉದ್ಘಾಟಿಸಿದರು. ಕುಂಭಾಶಿ ಪಂಚಾಯತ್ ಅಧ್ಯಕ್ಷ ಗೋವಿಂದ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ತೆಕ್ಕಟ್ಟೆ ಗ್ರಾಪಂ ಅಧ್ಯಕ್ಷೆ ಆಶಾಲತಾ ಶೆಟ್ಟಿ, ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಶೆಟ್ಟಿ, ತಾಲೂಕು ಆರೋಗ್ಯಧಿಕಾರಿ ಡಾ. ರಾಮರಾವ್, ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅನಿತ್ ರಾಜ್ ಮತ್ತಿತರರು ಹಾಜರಿದ್ದರು.
ಪ್ರಸನ್ನ ಕುಮಾರ್ ಸ್ವಾಗತಿಸಿದರು. ಶ್ರೀಧರ್ ಜಿ. ನಾಯಕ್ ನಿರೂಪಿಸಿದರು. ತ್ರೇಸಿಯಾ ವಂದಿಸಿದರು.