ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಣಿಪಾಲ ಈಶ್ವರನಗರದಲ್ಲಿ ಘರ್‌ಘರ್ ಕೊಂಕಣಿ ಸಂಭ್ರಮ

Mainashree
Updated On : 25 May 2013, 11:38 am

ಮಣಿಪಾಲ: ಇಲ್ಲಿನ ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆ ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಈಶ್ವರನಗರ ಸುಮಾ ಎಸ್. ನಾಯಕ್ ಅವರ ನಿವಾಸದಲ್ಲಿ ಜರುಗಿದ 'ಘರ್‌ಘರ್ ಕೊಂಕಣಿ' ಕಾರ್ಯಕ್ರಮವನ್ನು ಉಡುಪಿ ನಗರಸಭಾ ಪೌರಾಯುಕ್ತ ಗೋಕುಲ್  ದಾಸ್ ನಾಯಕ್ ಉದ್ಘಾಟಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನಾ ವಹಿಸಿ, ಘರ್‌ಘರ್ ಕೊಂಕಣಿ ಕಾರ್ಯಕ್ರಮದ ಔಚಿತ್ಯ ವಿವರಿಸಿದರು.  ಮುಖ್ಯ ಅತಿಥಿಗಳಾಗಿ ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಸುನೀತಾ ಎಸ್. ನಾಯಕ್, ಸಾರಸ್ವತ ಸಂದೇಶ್ ಪತ್ರಿಕೆ ಸಂಪಾದಕ ಸರಳೇಬೆಟ್ಟು ಗೋಪಾಲಕೃಷ್ಣ ನಾಯಕ್, ಅಕಾಡೆಮಿಯ ರಿಜಿಸ್ಟ್ರಾರ್ ಡಾ. ದೇವದಾಸ ಪೈ ಮಾತನಾಡಿದರು.
ಸುಮಿತ್ರಾ ಆರ್. ನಾಯಕ್ ಕಾರ್ಯಕ್ರಮ ನಿರೂಪಿಸಿದರು. ರಾಜಾಪುರ ಕೊಂಕಣಿಯಲ್ಲಿ ಸ್ವರಚಿತ ಕವನ ವಾಚನ, ಕೊಂಕಣಿ ಗೀತೆಗಳು, ಚುಟುಕು, ನುಡಿಮತ್ತುಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕುಸುಮಾ ನಾಯಕ್ ಪ್ರಾರ್ಥಿಸಿದರು. ಸುಮಾ ಎಸ್. ನಾಯಕ್ ಸ್ವಾಗತಿಸಿದರು. ಮಾಣಿಬೆಟ್ಟು ಭಾರತಿ ಆರ್. ನಾಯಕ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement