ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ವೇದಪಠಣದಿಂದ ವಾತಾವರಣ ಶುದ್ಧಿ, ಮನಶ್ಶಾಂತಿ'

Mainashree
Updated On : 25 May 2013, 11:37 am

ಸುಬ್ರಹ್ಮಣ್ಯ: ಗುತ್ತಿಗಾರು ವೇದಗಳನ್ನು  ಸುಶ್ರಾವ್ಯವಾಗಿ ಲಯಬದ್ದವಾಗಿ ಪಠಿಸಿದರೆ ಪರಿಸರ ಹಾಗೂ ಇಡೀ ವಾತಾವರಣ ಶುದ್ದಿಯಾಗುವುದರ ಜೊತಗೆ ಮನಸ್ಸು ಶಾಂತವಾಗುತ್ತದೆ ಎಂದು ಸುಳ್ಯ ಅರಂಬೂರು ಭಾರಧ್ವಾಜ ಆಶ್ರಮದ ಕಾಂಚಿ ಕಾಮಕೋಟಿ ವೇದಪಾಠ ಶಾಲೆ ಅಧ್ಯಾಪಕ ವೇ.ಮೂ. ವೆಂಕಟೇಶ ಶಾಸ್ತ್ರಿ ಹೇಳಿದರು.
ಅವರು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಇತ್ತೀಚೆಗೆ ಗುತ್ತಿಗಾರು ಅನೂಚಾನ ವಿದ್ಯಾಪ್ರತಿಷ್ಟಾನದ ವತಿಯಿಂದ ನಡೆದ ವಸಂತ ವೇದ ಶಿಬಿರದ ಸಮಾರೋಪ ಹಾಗೂ ಗುತ್ತಿಗಾರು ಹವ್ಯಕ ವಲಯ ಪರಿಷತ್ತಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವೇದಗಳು ಋಷಿಮುನಿಗಳ ಕೊಡುಗೆ. ಎಲ್ಲಾ ವೇದಗಳು ಕೂಡಾ ಸಮಾಜಕ್ಕೆ ದಾರಿ, ಮಾರ್ಗದರ್ಶನ ನೀಡಿದೆ. ಈ ಆಧಾರದಲ್ಲಿ ನಡೆದರೆ ಮನುಷ್ಯನಿಗೆ ಶಾಂತಿ, ನೆಮ್ಮದಿ ಇದೆ. ವಿದ್ಯಾರ್ಥಿಗಳು ಈ ದೃಷ್ಟಿಯಿಂದ ಯೋಚಿಸಬೇಕು ಎಂದರು.
ಗುತ್ತಿಗಾರು  ಹವ್ಯಕ ವಲಯ ಪರಿಷತ್ತಿನ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವೇ.ಮೂ. ಕರುವಜೆ ಕೇಶವ ಜೋಯಿಸರು, ವೇದ ಶಿಬಿರದ ಪ್ರಾಚಾರ್ಯ ಪಿ.ವಿ. ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು.
ವಸಂತ ವೇದ ಶಿಬಿರ 35 ದಿನಗಳ ಕಾಲ ನಡೆದಿತ್ತು. ಈ ಸಂದರ್ಭದಲ್ಲಿ  ಗಾಯತ್ರಿ ಜಪಮಂತ್ರದ ಮೂಲಕ ಗಾಯತ್ರಿ ಯಜ್ಞವೂ ನಡೆಯಿತು. ಇದೇ ವೇಳೆ ವೇದ ವಿದ್ಯಾಥರ್‌ಗಳು ಸಹಿತ ಆಗಮಿಸಿ ಭಕ್ತರು ಪ್ರತಿದಿನ  ಅಯೋಧ್ಯೆಯಲ್ಲಿ ರಾಮ ಮಂದಿರ ಸಾಂಗವಾಗಿ ನಿರ್ಮಾಣವಾಗಲು  ರಾಮತಾರಕ ಮಂತ್ರವನ್ನು ಪಠಿಸಿದ್ದರು. ಶಿಬಿರ ಮುಗಿಯುವ ಹೊತ್ತಿಗೆ 1 ಲಕ್ಷಕ್ಕೂ ಅಧಿಕ ರಾಮತಾರಕ ಮಂತ್ರ ಪಠಿಣಸಲಾಗಿತ್ತು. ಕಾರ್ಯಕ್ರಮದಲ್ಲಿ ಗುತ್ತಿಗಾರು ವಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ವೇಳೆ ಗೌರವಿಸಲಾಯಿತು.
ಗುತ್ತಿಗಾರು  ಹವ್ಯಕ ವಲಯ ಪರಿಷತ್ತಿನ ಕಾರ್ಯದರ್ಶಿ ಎಂ.ಜಿ. ಸತ್ಯನಾರಾಯಣ ಮೊಗ್ರ ಸ್ವಾಗತಿಸಿದರು. ಗುತ್ತಿಗಾರು ಅನೂಚಾನ ವಿದ್ಯಾಪ್ರತಿಷ್ಟಾನದ ಅಧ್ಯಕ್ಷ ಬಿ.ಕೆ. ಶ್ರೀಕೃಷ್ಣ ಗುಂಡಿಮಜಲು ವಂದಿಸಿದರು. ಗುತ್ತಿಗಾರು ಅನೂಚಾನ ವಿದ್ಯಾಪ್ರತಿಷ್ಟಾನದ ಕಾರ್ಯದರ್ಶಿ ಶಿವರಾಮ ಕರುವಜೆ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement