ಮದ್ಯಮುಕ್ತ ರಾಜ್ಯ ನಿರ್ಮಾಣ ಚಿಂತನೆ ಅಗತ್ಯ: ವೇದಿಕೆ
ಬೆಳ್ತಂಗಡಿ: ರಾಜ್ಯದಲ್ಲಿ ಅಗ್ಗದ ಮದ್ಯ ಬೇಕೆ ಬೇಡವೇ ಎನ್ನುವ ಚರ್ಚೆ ಮಾಡುವುದಕ್ಕಿಂತ ಮದ್ಯಮುಕ್ತ ರಾಜ್ಯ ರೂಪಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಏನು ಎಂಬುದರ ಕುರಿತ ಚರ್ಚೆಯ ಅಗತ್ಯವಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹೇಳಿದೆ.
ಕುಡಿತದ ಚಟ ಬಿಡಲಾಗದವರು ಸಾರಾಯಿ ಬದಲು ವಿಸ್ಕಿ, ಬ್ರಾಂದಿ ರಮ್ ಕುಡಿಯಲಾರಂಭಿಸಿದ್ದಾರೆ. ಇದರಿಂದಾಗಿ 15 ಪ್ಯಾಕೆಟ್ ಬದಲಿ 40 ವಿಸ್ಕಿ, ಬ್ರಾಂದಿ, ರಮ್ಗೆ ನೀಡುತ್ತಿದ್ದಾರೆಂಬ ಕಾರಣಕ್ಕಾಗಿ ಅಗ್ಗದ ಬೆಲೆಗೆ ಮದ್ಯ ನೀಡುವಂಥ ರಾಜ್ಯ ಸರ್ಕಾರದ ಪ್ರಸ್ತಾವನೆಯೇ ಹ್ಯಾಸ್ಯಾಸ್ಪದವಾಗಿದೆ. ಇದ ಬಡ ಮತ್ತು ಹಿಂದುಳಿದ ವರ್ಗದವರ ಸಂಸಾರವನ್ನು ಬೀದಿಪಾಲು ಮಾಡುವ ಪ್ರಯತ್ನ ಎನ್ನಬಹುದು. ಆದ್ದರಿಂದ ಸಾರ್ಕರ ಅಗ್ಗದ ಬೆಲೆಗೆ ಮದ್ಯ ನೀಡುವ ಪ್ರಸ್ತಾವನೆಯನ್ನೇ ಕೈಬಿಟ್ಟು ಮದ್ಯಮುಕ್ತ ರಾಜ್ಯವನ್ನಾಗಿ ಪರಿವರ್ತಿಸಬೇಕು ಎಂದು ವೇದಿಕೆ ಆಗ್ರಹಿಸಿದೆ. ಸರ್ಕಾರ ಈ ಪ್ರಸ್ತಾವನೆಯನ್ನು ಕೂಡಲೇ ಕೈ ಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಮತ್ತು ಹಕ್ಕೊತ್ತಾಯ ನಡೆಸುತ್ತದೆ ವೇದಿಕೆಯ ರಾಜ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್, ಸಂಚಾಲಕ ಡಾ.ಎಲ್.ಎಚ್. ಮಂಜುನಾಥ್, ನಿರ್ದೇಶಕ ವಿವೇಕ್ ವಿ. ಪಾಸ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.