ಯಕೃತ್ ಕಸಿ ಸುರಕ್ಷಿತ: ಡಾ.ಮ್ಯಾಥ್ಯೂ
ಮಂಗಳೂರು: ವಿದೇಶಗಳಲ್ಲಿ ಶೇ. 90 ರಿಂದ 95 ಯಕೃತ್ ಕಸಿಯನ್ನು ಮರಣ ಹೊಂದಿದ ದಾನಿಗಳಿಂದ ಪಡೆದು ಮಾಡಲಾಗುತ್ತದೆ ಎಂದು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಯಕೃತ್ತು ಕಸಿ ತಜ್ಞ ಡಾ. ಮ್ಯಾಥ್ಯೂ ಜೇಕಬ್ ಹೇಳಿದ್ದಾರೆ. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮಂಗಳೂರು ಘಟಕ ವತಿಯಿಂದ ಅತ್ತಾವರ ಐಎಂಎ ಹೌಸ್ನಲ್ಲಿ ನಡೆದ ಸಿಎಂಇ ಕಾರ್ಯಕ್ರಮದಲ್ಲಿ 'ಯಕೃತ್ತ್ ಕಸಿ' ಕುರಿತು ಮಾತನಾಡಿದರು. ಯಕೃತ್ತು ಕಸಿಯನ್ನು ಮರಣ ಹೊಂದಿದವರಿಂದ, ಜೀವಂತವಿರುವರಿಂದ ಪಡೆದು ಮಾಡಬಹುದು. ಹೆಚ್ಚಾಗಿ ಮೆದುಳು ಸಾವು ಸಂಭವಿಸಿದ ರೋಗಿಗಳಿಂದ ಯಕೃತ್ತ್ ಪಡೆದು ಇತರರಿಗೆ ಕಸಿ ಮಾಡಬಹುದು. ಭಾರತದಲ್ಲಿಯೂ ದಾನಿಗಳ ನಿರೀಕ್ಷೆಯಿದೆ ಎಂದರು ಹೇಳಿದರು. ತಜ್ಞರಾದ ಡಾ. ಕೈಸರ್ ರಾಜಾ ಮಾತನಾಡಿ, ಭಾರತದಲ್ಲಿ ಶೇ. 42 ಯಕೃತ್ತ್ ಕಸಿ ಮದ್ಯಪಾನಿ ರೋಗಿಗಳಿಗೆ ಮಾಡಲಾಗುತ್ತದೆ ಎಂದರು.