ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾರ್ಪೊರೇಟರ್ ನೇತೃತ್ವದಲ್ಲಿ ಪೊಲೀಸರ ಮೇಲೆ ಹಲ್ಲೆ!

Rashmi Kasaragodu
Updated On : 28 May 2013, 12:52 pm

ಮಂಗಳೂರು: ಮಂಗಳೂರಲ್ಲಿ ಹಿಂದೆಲ್ಲ ನಾಗರಿಕರ ಮೇಲೆ ದಾಳಿಯಾಗುತ್ತಿದ್ದರೆ ಈಗ ಪೊಲೀಸರ ಮೇಲೆಯೇ ಕಾರ್ಪೊರೇಟರ್ ನೇತೃತ್ವದಲ್ಲಿ ದಾಳಿಯಾಗಿದೆ!
ಹಲ್ಲೆಕೋರರಿಂದ ಏಟು ತಿಂದ ರಾತ್ರಿ ಗಸ್ತಿನಲ್ಲಿದ್ದ ಬಂದರು ಪೊಲೀಸರಾದ ಈಶ್ವರಸ್ವಾಮಿ ಮತ್ತು ಡಿ.ದಾಮೋದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರ ಮಧ್ಯರಾತ್ರಿ 1.30ರ ವೇಳೆಗೆ ಅಳಕೆ ಮೈದಾನದಲ್ಲಿ 5-6 ಮಂದಿ ಕುಡಿದು ಗಲಾಟೆ ಮಾಡುತ್ತಿದ್ದಾರೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಸಾರ್ವಜಕರ ದೂರು ಬಂದಿತ್ತು. ತಕ್ಷಣ ನಿಯಂತ್ರಣ ಕೊಠಡಿಯವರು ರಾತ್ರಿ ಗಸ್ತಿನ ಬಂದರು ಠಾಣೆಯ ಪಿಸಿಆರ್ ವಾಹನಕ್ಕೆ ಮಾಹಿತಿ ರವಾನಿಸಿದರು. ವಾಹನದಲ್ಲಿ ಇಬ್ಬರು ಪೊಲೀಸರು ಸ್ಥಳಕ್ಕೆ ಧಾವಿಸಿ, ಗಲಾಟೆ ಮಾಡಬೇಡಿ ಮನೆಗೆ ಹೋಗಿ ಎಂದು ಗುಂಪಿಗೆ ಸೂಚಿಸಿದರು.
ಆದರೆ ಪೊಲೀಸರೊಂದಿಗೆ ಮಾತಿಗೆ ಮಾತು ಬೆಳೆಸಿ ಪೊಲೀಸ್ ಕಾನ್‌ಸ್ಟೇಬಲ್ ದಾಮೋದರ್ ಅವರನ್ನು ದೂಡಿದ ಇಬ್ಬರು ದುಷ್ಕರ್ಮಿಗಳು ಲಾಠಿ ಹಿಡಿದು ಎಳೆದರು. ಪಿಸಿಆರ್ ಚಾಲಕ ಈಶ್ವರಸ್ವಾಮಿಗೆ ಲಾಠಿಯಿಂದ ಹಿಡಿದು ಹೊಡೆದರು. ಸ್ವಾಮಿ ತಪ್ಪಿಸಿಕೊಂಡು ಓಡಿಹೋಗಿ ಸಮೀಪದ ಪ್ಲ್ಯಾಟ್‌ಗೆ ನುಗ್ಗಿ, ಅಲ್ಲಿಂದಲೇ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಹಲ್ಲೆ ಮಾಡುತ್ತಿರುವುದನ್ನು ತಿಳಿಸಿದರು.
ಅಳಕೆಯಲ್ಲಿ ಪೊಲೀಸರ ಮೇಲೆ ಹಲ್ಲೆಯಾಗುತ್ತಿದೆ ತಕ್ಷಣ ಅಲ್ಲಿಗೆ ತೆರಳುವಂತೆ ವಯರ್‌ಲೆಸ್ ಮೂಲಕ ಸಂದೇಶ ಬಂತು. ಆದರೆ ದುಷ್ಕರ್ಮಿಗಳ ಪೊಲೀಸ್‌ನನ್ನು ಹಿಡಿದಿಟ್ಟುಕೊಂಡದ್ದರಿಂದ ವಯರ್‌ಲೆಸ್ ಸಂದೇಶ ಗೊತ್ತಾಗಿ ಅಲ್ಲಿಂದ ಎರಡು ಕಾರುಗಳಲ್ಲಿ ಓಡಿ ಹೋದರು.
ಗಲಾಟೆ ಮಾಡಿದವರಲ್ಲಿ ನಾಲ್ಕು ಮಂದಿಯ ಹೆಸರು ಪೊಲೀಸರಿಗೆ ತಿಳಿದಿದೆ. ಕಾರ್ಪೊರೇಟರ್ ಹೆಸರನ್ನು ಬಹಿರಂಗ ಪಡಿಸಿಲ್ಲ. ಬಂಧನದ ಬಳಿಕ ಸಂಪೂರ್ಣ ಮಾಹಿತಿ ಹೊರಬರಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement