ಟ್ಯಾಂಕರ್ ಪಲ್ಟಿ: ತೈಲ ಸೋರಿಕೆ
ಸುಳ್ಯ: ಬೊಳುಬೈಲು ಬಳಿ ಟ್ಯಾಂಕರ್ ಪಲ್ಟಿ ಹೊಡೆದು ಅದರಲ್ಲಿದ್ದ ಡೀಸೆಲ್ ಹಾಗೂ ಪೆಟ್ರೋಲ್ ಸೋರಿಕೆಯಾದ ಘಟನೆ ಸೋಮವಾರ ಸಂಭವಿಸಿದೆ. ಮಂಗಳೂರಿನಿಂದ ಡೀಸೆಲ್ ಹಾಗೂ ಪೆಟ್ರೋಲ್ ತುಂಬಿಸಿ ಕುಶಾಲನಗರದತ್ತ ಹೋಗುತ್ತಿದ್ದ ಟ್ಯಾಂಕರ್ ಬೊಳುಬೈಲು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯಿತು. ಪರಿಣಾಮ ಟ್ಯಾಂಕ್ ಬಿರುಕು ಬಿಟ್ಟು ತೈಲ ಸೋರಿಕೆಯಾಗತೊಡಗಿತು. ಇದನ್ನು ಗಮನಿಸಿದ ಊರವರು ಮತ್ತು ಆ ದಾರಿಯಲ್ಲಿ ಸಾಗುತ್ತಿದ್ದ ವಾಹನದವರು ಕ್ಯಾನ್ಗಳನ್ನು ತಂದು ಡೀಸೆಲ್ ಹಾಗೂ ಪೆಟ್ರೋಲ್ ತುಂಬಿಸಿ ಕೊಂಡೊಯ್ದರು. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಸುಳ್ಯ ಪೊಲೀಸರು ಗುಂಪುಗೂಡಿದ್ದ ಜನರನ್ನು ಚದುರಿಸಿದರು.